
ಹಿರಿಯಡ್ಕ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಕ್ರಿಪ್ಟೋ ಕರೆನ್ಸಿಯ ಮೆಸೇಜ್ ನಂಬಿದ ಯುವತಿ ಒಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಕುರಿತು ದೂರು ದಾಖಲಾಗಿದೆ.
ಚೈತ್ರ (28) ಎಂಬ ಯುವತಿಯು ತಮ್ಮ ಮೊಬೈಲ್ ಗೆ ಕ್ರಿಪ್ಟೋ ಕರೆನ್ಸಿ ಬಗ್ಗೆ ಮೆಸೇಜ್ ಬಂದದ್ದನ್ನು ಗಮನಿಸಿ ಈ ಮೆಸೇಜ್ ನಲ್ಲಿ ತಿಳಿಸಿದಂತೆ ಗೇಮ್ ಡೌನ್ಲೋಡ್ ಮಾಡಿದ್ದು ನಂತರ ಅಪರಿಚಿತರು ಸೂಚಿಸಿದಂತೆ 20,000 ರೂ. ವರ್ಗಾಯಿಸಿದ್ದಾರೆ. ಇದೇ ರೀತಿ ಗೂಗಲ್ ಪೇ ಮೂಲಕ ಒಟ್ಟು 2. 80 ಲಕ್ಷ ಹಣವನ್ನು ವಿವಿಧ ಖಾತೆಗೆ ವರ್ಗಾಯಿಸಿದ್ದು ಇದೀಗ ಮೋಸ ಹೋಗಿರುವುದಾಗಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.













