
ಅಜೆಕಾರು: ಸೆಪ್ಟೆಂಬರ್ 19, 2026ರಂದು ಶ್ರೀ ಮಹಾಗಣಪತಿ ದೇವಸ್ಥಾನ ಪದ್ಮನಗರ, ಅಜೆಕಾರು ಮತ್ತು ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ವತಿಯಿಂದ ದೇಶಪ್ರೇಮದ ಚಿಂತನೆಯೊಂದಿಗೆ ‘ದೇಶಸುಧಾ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ “ಭಾರತದ ವಿಘ್ನ ಕಳೆದ ವಿನಾಯಕ” ಎಂಬ ವಿಷಯದ ಕುರಿತು ಉಪನ್ಯಾಸ ನಡೆಯಲಿದೆ. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಲೇಖಕರು ಹಾಗೂ ಅಂಕಣಕಾರರಾದ ಪ್ರಕಾಶ್ ಮಲ್ಪೆ ಭಾಗವಹಿಸಲಿದ್ದಾರೆ.
ಕಾರ್ಯಕ್ರಮವು ಸಂಜೆ 6.30ಕ್ಕೆ ಅಜೆಕಾರು ಪದ್ಮಗೋಪಾಲ್ ಸಭಾಂಗಣದಲ್ಲಿ ನಡೆಯಲಿದ್ದು ಕಾರ್ಯಕ್ರಮಕ್ಕೆ ಗೌರವಾಧ್ಯಕ್ಷರು, ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸರ್ವ ಸದಸ್ಯರು, ಅಜೆಕಾರು ಶ್ರೀ ಮಹಾಗಣಪತಿ ದೇವಸ್ವಾನ, ಪದಾಧಿಕಾರಿಗಳು ಮತ್ತು ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ನ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಉಪಸ್ಥಿತಿ ಇರಲಿದೆ. ಈ ಕಾರ್ಯಕ್ರಮಕ್ಕೆ ಎಲ್ಲಾ ದೇಶಪ್ರೇಮಿಗಳಿವೆ ಆಹ್ವಾನಿಸಲಾಗಿದೆ.
ಕಾರ್ಯಕ್ರಮವು Namma Karla News Channel ಹಾಗೂ JnanaSudha YouTubeನಲ್ಲಿ ನೇರ ಪ್ರಸಾರವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.






























































































































