
ಕುಂದಾಪುರ: ಗಂಗೊಳ್ಳಿ ಕಂಚುಗೋಡು ನಿವಾಸಿ ಅಶ್ವತ್ತಮ್ಮ ಎಂಬವರು ಭಿಕ್ಷೆ ಬೇಡಿ ಬಂದ ಹಣದಲ್ಲಿ ಉಳಿತಾಯ ಮಾಡಿ ಕುಂದಾಪುರದ ಲಕ್ಷ್ಮಿ ನಾರಾಯಣ ದೇವಸ್ಥಾನಕ್ಕೆ 1.16 ಲಕ್ಷ ರೂಗಳನ್ನು ದಾನವಾಗಿ ನೀಡಿ ಎಲ್ಲರಲ್ಲೂ ಬೆರಗು ಮೂಡಿಸಿದ್ದಾರೆ.
ಅಶ್ವತ್ಥಮ್ಮ ಶಬರಿಮಲೆಯ ಪರಮ ಭಕ್ತೆಯಾಗಿದ್ದು ಈ ಮೊದಲು ಕೂಡ ಆನೆಗುಡ್ಡೆ ಕುಂಭಾಶಿ ದೇವಸ್ಥಾನ, ಮಂಗಳಾದೇವಿ, ಬಪ್ಪನಾಡು, ಪೊಳಲಿ ದೇವಸ್ಥಾನಗಳಿಗೆ ತಲಾ 1.5 ಲಕ್ಷ ರೂ, ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನಕ್ಕೆ ಒಂದು ಲಕ್ಷ ರೂಗಳನ್ನು ಭೋಜನ ನಿಧಿಗೆ ದಾನವಾಗಿ ನೀಡಿದ್ದರು.
ಈಕೆ ಅನ್ನದಾನವೇ ಶ್ರೇಷ್ಠದಾನ ಎಂದು ನಂಬಿದ್ದು ಈ ಬಾರಿ ಲಕ್ಷ್ಮಿ ನಾರಾಯಣ ದೇವಸ್ಥಾನಕ್ಕೆ ಭಿಕ್ಷೆಯ ಹಣದಲ್ಲಿ ದಾನ ನೀಡುವ ಮೂಲಕ ಗಮನ ಸೆಳೆದಿದ್ದಾರೆ.













