
ಫ್ಲೋರಿಡಾ: ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಇರಾನ್ ಪರಮಾಣು ಶಕ್ತಿ ಹೊಂದಿದರೆ ಜಗತ್ತಿಗೆ ದೊಡ್ಡ ಅಪಾಯ ಉಂಟಾಗುತ್ತದೆ. ಇರಾನ್ ಅಸ್ತ್ರಗಳನ್ನು ಪಡೆದರೆ ಮೊದಲ ಗುರಿ ಇಸ್ರೇಲ್ ಆಗಬಹುದು ಎಂದು ಟ್ರಂಪ್ ಆತಂಕ ವ್ಯಕ್ತಪಡಿಸಿದರು.
ಈ ಅಪಾಯ ಮಧ್ಯಪ್ರಾಚ್ಯಕ್ಕೆ ಮಾತ್ರ ಸೀಮಿತವಲ್ಲದೆ ಯುರೋಪ್ ಹಾಗೂ ಅಮೆರಿಕಕ್ಕೂ ತಲುಪಬಹುದು. ಇರಾನ್ ಪರಮಾಣು ಶಸ್ತ್ರ ಹೊಂದುವ ಪರಿಸ್ಥಿತಿ ಬರದಂತೆ ತಡೆಯುವ ಸಾಮರ್ಥ್ಯ ನಮ್ಮಲ್ಲಿದೆ ಎಂದು ಹೇಳಿದ ಟ್ರಂಪ್ ಇಂತಹ ಅಸ್ತ್ರಗಳು ಹುಚ್ಚರ ಕೈಗೆ ಸಿಗದಂತೆ ನೋಡಿಕೊಳ್ಳುವುದು ಅಮೆರಿಕದ ಭದ್ರತೆಗಾಗಿ ಅಗತ್ಯವೆಂದು ಸ್ಪಷ್ಟಪಡಿಸಿದರು.
ಇರಾನ್‌ನ ಪರಮಾಣು ಕಾರ್ಯಕ್ರಮದ ವಿರುದ್ಧ ಅಮೆರಿಕವು ಮೊದಲಿನಿಂದಲೂ ಕಠಿಣ ನಿಲುವು ಹೊಂದಿದ್ದು ಇತ್ತೀಚಿನ ಉದ್ವಿಗ್ನ ಪರಿಸ್ಥಿತಿಯಲ್ಲಿ ಟ್ರಂಪ್ ಹೇಳಿಕೆ ಜಾಗತಿಕ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ. ಇಸ್ರೇಲ್ ಸುರಕ್ಷತೆ ಮತ್ತು ಜಾಗತಿಕ ಶಾಂತಿ ಕಾಪಾಡುವುದು ಅಮೆರಿಕದ ಪ್ರಮುಖ ಆದ್ಯತೆ ಎಂದು ಟ್ರಂಪ್ ತಿಳಿಸದ್ದು ಈ ಹೇಳಿಕೆ ಇರಾನ್ ಮೇಲೆ ಒತ್ತಡವನ್ನು ಮತ್ತಷ್ಟು ಹೆಚ್ಚಿಸುವ ಸೂಚನೆ ನೀಡಿದೆ.


































