ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ

ಮಣಿಪಾಲದ ಖ್ಯಾತ ಮೂಳೆ ತಜ್ಞರಾದ ಶ್ರೀಯುತ ಕಾರ್ಕಳ ಶರತ್ ರಾವ್ ರವರು ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಹಾಗೂ ಆಂಜನೇಯ ದೇವಸ್ಥಾನಕ್ಕೆ ಮೇ ಒಂದರಂದು ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು.
ಅವರು ಮೇ 1ರಿಂದ ಮಣಿಪಾಲ ವಿಶ್ವವಿದ್ಯಾಲಯದ ಉಪಕುಲಪತಿಯ ಹುದ್ದೆಯನ್ನು ಪಡೆದುಕೊಂಡಿದ್ದಾರೆ. ಅವರು ತಮ್ಮ ವಿದ್ಯಾಭ್ಯಾಸವನ್ನು ಕಾರ್ಕಳ ಪೆರ್ವಾಜೆ ಶಾಲೆಯಲ್ಲಿ,ಶ್ರೀಮದ್ ಭುವನೇಂದ್ರ ಪ್ರೌಢಶಾಲೆ ಹಾಗೂ ಭುವನೇಂದ್ರ ಕಾಲೇಜಿನಲ್ಲಿ ಮಾಡಿದವರು. ಅವರ ತಂದೆಯವರು ಶ್ರೀಯುತ ಕಾರ್ಕಳ ಸೂರ್ಯನಾರಾಯಣರಾವ್ ಭುವನೇಂದ್ರ ಕಾಲೇಜಿನ ರಸಾಯನಶಾಸ್ತ್ರ ಶಿಕ್ಷಕರಾಗಿದ್ದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಜಯರಾಮ್ ಪ್ರಭು, ಡಾಕ್ಟರ್ ಟಿ ಎಂ ಎ ಫೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ್ ಬಲ್ಲಾಳ, ಡಾಕ್ಟರ್ ಕಾರ್ತಿಕ್ ರಾವ್, ಡಾ. ಯೋಗೀಶ್ ಕಾಮತ್, ಯೋಗೀಶ್ ಪ್ರಭು, ನರೇಂದ್ರ ಕಾಮತ್, ಸಿ ಎ ಶಿವಾನಂದ ಪೈ, ಹಾಗೂ ಭುವನೇಂದ್ರ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಯುತ ನಾರಾಯಣ ಶೆಣೈ ಉಪಸ್ಥಿತರಿದ್ದರು.




















