ನಾಗರಬಾವಿ ಕೆರೆ ಪುನಶ್ಚೇತನ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ .ಎಸ್. ಎಸ್ ಪರಿಶೀಲನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ( ರಿ )ಕಾರ್ಕಳ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮ ದಡಿಯಲ್ಲಿ ಕಾರ್ಕಳ ನಗರದ ನಾಗರಬಾವಿ ಕೆರೆ ಪುನಶ್ಚೇತನ ಗೋಳಿಸುತ್ತಿದ್ದು ಪ್ರಗತಿಯ ಹಂತದ ಕಾಮಗಾರಿಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಅನಿಲ್ ಕುಮಾರ್ ಎಸ್ ಎಸ್ ರವರು ಪರಿಶೀಲಿಸಿ 2027ರಲ್ಲಿ ಕಾರ್ಕಳದಲ್ಲಿ ನಡೆಯುವ ಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಕೆರೆ ಅಭಿವೃದ್ಧಿ ಗೊಳ್ಳುತ್ತಿದ್ದು ಹೂಳು ತೆಗೆದು ದಂಡೆಗಳನ್ನು ಪುನಃ ನಿರ್ಮಾಣ ಮತ್ತು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.
ಒಟ್ಟು 15 ಅಡಿ ಎತ್ತರದಲ್ಲಿ ಕಲ್ಲು ಕಟ್ಟಿ ದಂಡೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ 7 ಅಡಿ ವರೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಯೋಜನೆ ಸುಮಾರು 23.18 ಲಕ್ಷ ರೂ.ವೆಚ್ಚದಲ್ಲಿ ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ಕಾಮಗಾರಿಯ ಬಗ್ಗೆ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಮುಖ್ಯ ಹಣಕಾಸು ಅಧಿಕಾರಿಯವರಾದ ಶಾಂತರಾಮ್ ಆರ್ ಫೈ, ಕೆರೆ ಸಮಿತಿಯ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ, ಯೋಜನಾಧಿಕಾರಿಯವರಾದ ಬಾಲಕೃಷ್ಣ ಹಿರಿಂಜ,ಸಮಿತಿ ಸದಸ್ಯರಾದ ಮೋಹನ್ ಪಡಿವಾಲ್, ಪ್ರಭಾತ್ ಜೈನ್,ಹರಿ ಪ್ರಕಾಶ್ ಶೆಟ್ಟಿ, ವಸಂತ್ ಶೆಟ್ಟಿ, ಅಭಿಯಂತರಾದ ಪ್ರದೀಪ್, ಕೃಷಿ ಮೇಲ್ವಿಚಾರಕರಾದ ಬ್ರಿಜೇಶ್, ಗ್ರಾಮಸ್ಥರು ಉಪಸ್ಥಿತರಿದ್ದರು.


































