ಸಂತಾಪ ಸೂಚಿಸಿದ ಶಾಸಕ ವಿ. ಸುನಿಲ್ ಕುಮಾರ್

ಕಾರ್ಕಳ ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಗೋಪಾಲಕೃಷ್ಣ ರಾವ್ ಅವರು ವಯೋಸಹಜ ಕಾಯಿಲೆಯಿಂದ ನಿನ್ನೆ ರಾತ್ರಿ ದೈವಾಧೀನರಾಗಿದ್ದಾರೆ.
ನೇರನುಡಿ, ಸ್ಪಷ್ಟ ನಿಲುವು ಹಾಗೂ ವಿಶೇಷ ವ್ಯಕ್ತಿತ್ವದ ಗೋಪಾಲಕೃಷ್ಣ ರಾವ್ ಅವರು ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಸಲ್ಲಿಸಿದ ಸೇವೆ ಮತ್ತು ದೇವಸ್ಥಾನದ ಅಭಿವೃದ್ಧಿಗೆ ಮಾಡಿದ ಪರಿಶ್ರಮ ಸ್ಮರಣೀಯವಾಗಿದೆ. ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವವನ್ನು ಅವರ ಮಾರ್ಗದರ್ಶನದಲ್ಲಿ ಸ್ಮರಣೀಯವಾಗಿ ನೆರವೇರಿಸಲಾಗಿದೆ.
ಅವರ ನಿಧನಕ್ಕೆ ಶಾಸಕ ವಿ. ಸುನಿಲ್ ಕುಮಾರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿ, ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.





















































































