
ಕಾರ್ಕಳ ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸ್ತರರಾದ ಗೋಪಾಲಕೃಷ್ಣರಾವ್(91) ವಯೋಸಹಜ ಕಾಯಿಲೆಯಿಂದ ನಿನ್ನೆ ರಾತ್ರಿ ದೈವಾಧೀನರಾಗಿದ್ದಾರೆ.
ನೀರ ನುಡಿ ,ಸ್ಪಷ್ಟ ನಿಲುವು ವಿಶೇಷ ವ್ಯಕ್ತಿತ್ವದ ಇವರು ದೇವಸ್ಥಾನದಲ್ಲಿ ಸಲ್ಲಿಸಿದ ಸೇವೆ ದೇವಸ್ಥಾನದ ಅಭಿವೃದ್ಧಿಗೆ ಮಾಡಿದ ಪರಿಶ್ರಮ ಸ್ಮರಣೀಯ. ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಇವರ ಮಾರ್ಗದರ್ಶನದಲ್ಲಿ ಸ್ಮರಣೀಯವಾಗಿ ನೆರವೇರಿದೆ.
ಮೃತರು ಪತ್ನಿ ಎರಡು ಗಂಡು, ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.





















































































