
ಉಡುಪಿ ಜಿಲ್ಲೆ ಫುಟ್ಬಾಲ್ ಅಸೋಸಿಯೇಷನ್ ಹಾಗೂ ನಿಟ್ಟೆ ವಿದ್ಯಾ ಸಂಸ್ಥೆಯವರು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಿಟ್ಟೆ ಯ ಬಿಸಿ ಆಳ್ವ ಕ್ರೀಡಾಂಗಣದಲ್ಲಿ ನಡೆಸಿದ ಪುಟ್ಬಾಲ್ ಪಂದ್ಯಾಟದಲ್ಲಿ ಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಥಮಿಕ ಶಾಲಾ ವಿಭಾಗದ ಹುಡುಗಿಯರು ಪ್ರಥಮ ಸ್ಥಾನ ಪಡೆದರು. ತಂಡದಲ್ಲಿ ಸಿಯಾ ಶೆಟ್ಟಿ, ಖುಷಿ, ಮನ್ವಿತಾ, ರಿಹಾ, ಸಿಮ್ರಾನ್, ಆಕೃತಿ, ಖುಷಿ, ಸಜನಿ, ಧನ್ವಿ, ಪ್ರತ್ಯೂಷ್, ಆಧ್ಯಾ, ದಿಶಾ, ಶಾರ್ವಿ ಇವರು ಭಾಗವಹಿಸಿರುತ್ತಾರೆ.
ಅದೇ ರೀತಿ ಶಾಲಾ ಪ್ರೌಢ ವಿಭಾಗದ ಬಾಲಕಿಯರು ಫೈನಲ್ ಪ್ರವೇಶಿಸಿದ್ದಾರೆ. ತಂಡದಲ್ಲಿ ಶ್ರಾವಣಿ, ಅದಿತಿ, ಸಮೃದ್ಧಿ, ಪ್ರೀಮಾ, ಪ್ರೇಕ್ಷಾ, ಮನಸ್ವಿ, ಆಂಚಲ್, ಪ್ರಣಮ್ಯ, ಸಂಹಿತಾ, ಮಾನ್ವಿ, ಶ್ರೀಯಾ, ಆನ್ಯ, ಇಷ್ಟ, ಪ್ರತೀಕ್ಷಾ ಇವರು ಭಾಗವಹಿಸಿರುತ್ತಾರೆ.
ಪ್ರೌಢ ಶಾಲಾ ವಿಭಾಗದ ಹುಡುಗರು ಸೆಮಿ ಫೈನಲ್ ತಲುಪಿದ್ದಾರೆ. ತಂಡದಲ್ಲಿ ಹರ್ಷಿತ್, ಸನ್ವಿತ್, ಅನಿಕೇತ್, ಗಗನ್, ಸುಹಾಲ್, ಧನುಷ್, ಪೃಥ್ವಿ, ಆದರ್ಶ್, ಪ್ರದ್ಯೋತ್, ಪ್ರಣಮ್, ಪ್ರವೀಣ್, ಪೈಜಾನ್, ರೋಶನ್, ಅಹನ್ ಇವರು ಭಾಗವಹಿಸಿರುತ್ತಾರೆ.
ಬೆಸ್ಟ್ ಡಿಫೆನ್ಸ್ ಅವಾರ್ಡ್ ರಿಹಾ ಹಾಗೂ ಬೆಸ್ಟ್ ಸ್ಟ್ರೈಕರ್ ಅವಾರ್ಡ್ ಸಿಯಾ ಶೆಟ್ಟಿ ಪಡೆದಿರುತ್ತಾರೆ.
ಇವರನ್ನು ಶಾಲಾ ಅಧ್ಯಕ್ಷರಾದ ಜೇಸಿ ಚಿತ್ತರಂಜನ್ ಶೆಟ್ಟಿ ಯವರು, ಶಾಲಾ ಮುಖ್ಯೋಪಾಧ್ಯಾಯರಾದ ಡಾ. ಶಂಕರನ್ ಪಿ ರವರು, ಶಾಲಾ ಆಡಳಿತ ಅಧಿಕಾರಿ ಪ್ರಣೀತ್ ಹಾಗೂ ದೈಹಿಕ ಶಿಕ್ಷಕರಾದ ಪ್ರತಾಪ್ ರವರು ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದರು.

























































