
ಕಾರ್ಕಳ: ತುಳು ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ‘ಸಿಂಗಾರ ಕಲಾವಿದೆರ್ ಬಜಗೋಳಿ’ ತಂಡದ ಈ ವರ್ಷದ ಹೊಸ ತುಳು ನಾಟಕ ‘ಅಂಗೈ ಮದಿಮಾಲ್’ ರಂಗ ಪ್ರಯೋಗದ ಶುಭ ಮುಹೂರ್ತವು ಶೃಂಗೇರಿ ಶಾರದಾಂಬೆಯ ಪುಣ್ಯ ಸಾನಿಧ್ಯದಲ್ಲಿ ಅತ್ಯಂತ ಸಂಭ್ರಮದಿಂದ ಭಾನುವಾರ ನೆರವೇರಿತು.
ಅಶು ಬಜಗೋಳಿ ಅವರ ಸಾರಥ್ಯದಲ್ಲಿ ಹಾಗೂ ಗಣೇಶ್ ಬಿ. ಅಳಿಯೂರು ಅವರ ನಿರ್ದೇಶನದಲ್ಲಿ ಈ ನಾಟಕವು ಮೂಡಿಬರಲಿದೆ.ಈ ಶುಭ ಸಮಾರಂಭದಲ್ಲಿ ನಾಟಕದ ತಂಡದ ಪ್ರಮುಖರಾದ ಅಶು ಬಜಗೋಳಿ, ಪ್ರವೀಣ್ ಶೆಟ್ಟಿ ಬಜಗೋಳಿ, ಅಶ್ವಥ್ ಚೆಂಡೆ, ಸುಧೀಶ್ ಪುತ್ತಿಗೆ, ಸಂಪತ್ ಸಾಣೂರು ಹಾಗೂ ಶ್ಯಾಮ್ ಪ್ರಸಾದ್ ನಲ್ಲೂರು ಉಪಸ್ಥಿತರಿದ್ದರು.
ತುಳು ರಂಗಭೂಮಿ ಪ್ರೇಕ್ಷಕರಿಗೆ ವಿಭಿನ್ನ ಮನರಂಜನೆ ನೀಡಲು ಸಜ್ಜಾಗುತ್ತಿರುವ ಈ ‘ಅಂಗೈ ಮದಿಮಾಲ್’ ನಾಟಕವು ಅತೀ ಶೀಘ್ರದಲ್ಲೇ ಪ್ರದರ್ಶನಗೊಳ್ಳಲಿದೆ.






















