29 C
Udupi
Saturday, September 26, 2026
spot_img
spot_img
HomeBlogಹೃದಯದ ಆರೋಗ್ಯಕ್ಕಾಗಿ ಒಂದು ಹೆಜ್ಜೆ - ಕಾರ್ಕಳದಲ್ಲಿ ಸೆ. 27ರಂದು "ಬೃಹತ್ ವಾಕ್ ಥಾನ್"

ಹೃದಯದ ಆರೋಗ್ಯಕ್ಕಾಗಿ ಒಂದು ಹೆಜ್ಜೆ – ಕಾರ್ಕಳದಲ್ಲಿ ಸೆ. 27ರಂದು “ಬೃಹತ್ ವಾಕ್ ಥಾನ್”

ಕಾರ್ಕಳ: ವಿಶ್ವ ಹೃದಯ ದಿನ 2026ರ ಅಂಗವಾಗಿ ಹೃದಯದ ಆರೋಗ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ, ರೋಟರಿ ಕ್ಲಬ್ ಕಾರ್ಕಳ ರಾಕ್‌ಸಿಟಿ, ರೋಟರಾಕ್ ಕ್ಲಬ್ ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ, ರೋಟರಾಕ್ಟ್ ಕ್ಲಬ್ ಸರಕಾರಿ ಪಾಲಿಟೆಕ್ನಿಕ್ ಕಾರ್ಕಳ ಸಹಯೋಗದಲ್ಲಿ ಸೆಪ್ಟೆಂಬರ್ 27, 2026ರ ಭಾನುವಾರದಂದು ವಾಕ್‌ಥಾನ್ ಆಯೋಜಿಸಲಾಗಿದೆ.
ಅನಂತಶಯನ ವೃತ್ತ, ಕಾರ್ಕಳದಿಂದ ಬೆಳಿಗ್ಗೆ 7:30 ಗಂಟೆಗೆ ವಾಕ್‌ಥಾನ್ ಆರಂಭವಾಗಲಿದ್ದು, ಮಾನ್ಯ ಶಾಸಕರಾದ ಶ್ರೀ ವಿ. ಸುನಿಲ್ ಕುಮಾರ್ ಅವರು ಫ್ಲಾಗ್ ಆಫ್ ಮೂಲಕ ವಾಕ್‌ಥಾನ್ ಗೆ ಚಾಲನೆ ನೀಡಲಿದ್ದಾರೆ. ವಾಕ್‌ಥಾನ್ ಅನಂತಶಯನ ವೃತ್ತದಿಂದ ಪ್ರಾರಂಭವಾಗಿ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ, ಕಾರ್ಕಳದವರೆಗೆ ನಡೆಯಲಿದೆ. ಕಾರ್ಕಳ ಹಾಗೂ ಸುತ್ತಮುತ್ತಲಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಬ್ಯಾಂಕ್‌ಗಳು ಹಾಗೂ ಇತರ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ವಾಕ್‌ಥಾನ್ ಸಂದರ್ಭದಲ್ಲಿ ಕಾಲೇಜುವಾರು ಅತಿ ಹೆಚ್ಚು ಭಾಗವಹಿಸುವಿಕೆ, ಘೋಷವಾಕ್ಯ (ಸ್ಲೋಗನ್ ಶೌಟಿಂಗ್) ಸ್ಪರ್ಧೆ, ಅತ್ಯಂತ ಶಿಸ್ತುಬದ್ಧ ತಂಡ ಹಾಗೂ ಪ್ಲಕಾರ್ಡ್ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಾಕ್‌ಥಾನ್ ನಂತರ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಆವರಣದಲ್ಲಿ ಸ್ಕಿಟ್ ಸ್ಪರ್ಧೆ ನಡೆಯಲಿದೆ.

ನಂತರ ನಡೆಯುವ ಔಪಚಾರಿಕ ಕಾರ್ಯಕ್ರಮದಲ್ಲಿ ಡಾ ಕಾರ್ತಿಕ್  ರಾವ್   ಸೀನಿಯರ್  ಫಿಸಿಷಿಯನ್, ಕಾರ್ಕಳ ಅವರು ಹೃದಯದ ಆರೋಗ್ಯ ಹಾಗೂ ಹೃದಯ ಸಂಬಂಧಿತ ಕಾಯಿಲೆಗಳ ಕುರಿತು ಜಾಗೃತಿ ಶಿಕ್ಷಣ ನಡೆಸಲಿದ್ದಾರೆ. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಸಿಸ್ಟೆಂಟ್ ಗವರ್ನರ್ Rtn. PHF ಸುರೇಶ್ ನಾಯಕ್ ಹಾಗೂ ಟೀಚಿಂಗ್ ಹಾಸ್ಪಿಟಲ್ಸ್, ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ನಿರ್ವಾಣಾಧಿಕಾರಿ ಡಾ. ಸುಧಾಕರ್ ಕಂಟಿಪುಡಿ  ಅವರು ಉಪಸ್ಥಿತರಿರುವ ನಿರೀಕ್ಷೆಯಿದೆ.

ಕಾರ್ಯಕ್ರಮದ ಕುರಿತು ಮಾತನಾಡಿದ ಡಾ. ಸಂಜಯ್ ಕುಮಾರ್, ಮುಖ್ಯ ವೈದ್ಯಾಧಿಕಾರಿ, ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ, ಕಾರ್ಕಳ, ಅವರು, “ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಹಾಗೂ ರೋಟರಿ ಕ್ಲಬ್ ಕಾರ್ಕಳ ರಾಕ್‌ಸಿಟಿ ವತಿಯಿಂದ ಪ್ರತಿವರ್ಷ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗುತ್ತಿದೆ. ಈ ವಾಕ್‌ಥಾನ್ ಮೂಲಕ ಪ್ರತಿಯೊಬ್ಬರೂ ತಮ್ಮ ಹೃದಯದ ಆರೋಗ್ಯದ ಬಗ್ಗೆ ಗಮನ ಹರಿಸಲು ಪ್ರೇರೇಪಿತರಾಗಬೇಕು. ಆರೋಗ್ಯಕರ ಹೃದಯದತ್ತ ಇದು ಪ್ರತಿಯೊಬ್ಬರ ಮೊದಲ ಹೆಜ್ಜೆಯಾಗಲಿ”* ಎಂದು ಹೇಳಿದರು.

ಹೃದಯದ ಆರೋಗ್ಯದ ತಪಾಸಣೆಗೆ ಉತ್ತೇಜನ ನೀಡುವ ಉದ್ದೇಶದಿಂದ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 30, 2026ರವರೆಗೆ ವಿಶೇಷ ರಿಯಾಯಿತಿ ದರದಲ್ಲಿ ಹೃದಯ ಆರೋಗ್ಯ ತಪಾಸಣಾ ಪ್ಯಾಕೇಜ್ ಲಭ್ಯವಿದೆ. ಹೃದಯದ ಆರೋಗ್ಯವನ್ನು ಪರಿಶೀಲಿಸುವುದು, ಹೃದಯ ಸಂಬಂದಿತ ಕಾಯಿಲೆಗಳನ್ನು  ಆರಂಭಿಕ ಹಂತದಲ್ಲೇ ಗುರುತಿಸುವುದು ಹಾಗೂ ಸೂಕ್ತ ಚಿಕಿತ್ಸೆಗೆ ಮಾರ್ಗದರ್ಶನ ನೀಡುವ ಉದ್ದೇಶವನ್ನು ಈ ಪ್ಯಾಕೇಜ್ ಹೊಂದಿದೆ. ಈ ಸೇವೆ ಅಪಾಯಿಂಟ್‌ಮೆಂಟ್ ಆಧಾರದ ಮೇಲೆ ಮಾತ್ರ ಲಭ್ಯವಿರುತ್ತದೆ.

ರೋಟರಿ ಕ್ಲಬ್ ಕಾರ್ಕಳ ರಾಕ್‌ಸಿಟಿಯ ಅಧ್ಯಕ್ಷರಾದ ಮಂಜುನಾಥ್ ಹೆಗ್ಡೆ ಮಾತನಾಡಿ, ಹೃದಯದ ಆರೋಗ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ರೋಟರಿ ಕ್ಲಬ್‌ನ ಬದ್ಧತೆಯಾಗಿದೆ ಎಂದು ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ವಾಕ್‌ಥಾನ್‌ನಲ್ಲಿ ಭಾಗವಹಿಸಿ, ಹೃದಯದ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಸೆ. 26ರಂದು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಗಾಗಿ ಆಸ್ಪತ್ರೆಯ ಸಹಾಯವಾಣಿ 9731601150 / 08258-230583 ಸಂಪರ್ಕಿಸಬಹುದು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page