
ತುಮಕೂರು: ನೊಣನವಿನಕೆರೆಯ ಶಿವಯೋಗಿಶ್ವರ್ ಶ್ರೀಗಳು ಮಾಧ್ಯಮಗಳೊಂದಿಗೆ ಮಾತನಾಡಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವ್ಯಕ್ತಿತ್ವ ವಜ್ರದಷ್ಟು ಗಟ್ಟಿಯಾಗಿದ್ದರೂ, ಹೃದಯದಿಂದ ಮೃದು ಸ್ವಭಾವದವರು ಎಂದು ಹೇಳಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ಮಠದ ಆಶೀರ್ವಾದದಿಂದ ಬೆಳೆದವರು. ಕಷ್ಟದ ಸಂದರ್ಭಗಳಲ್ಲಿಯೂ ಮಠದ ಆಶೀರ್ವಾದ ಪಡೆದಿದ್ದು, ಮಠದ ಮಗನಾಗಿ ಬಂದಿದ್ದಾರೆ ಎಂದು ಹೇಳಿದರು.
ಹಿಂದಿನ ವ್ಯಕ್ತಿತ್ವವನ್ನು ಬದಲಿಸಿಕೊಂಡಿರುವ ಡಿಕೆ ಶಿವಕುಮಾರ್ ಇದೀಗ ಎಲ್ಲರ ಆತ್ಮೀಯ ನಾಯಕರಾಗಿದ್ದಾರೆ. ತಾಯಿ ವಾತ್ಸಲ್ಯದಂತೆ ರಾಜ್ಯದ ಜನರನ್ನು ಪ್ರೀತಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸ್ಥಾನಕ್ಕೇರುತ್ತಾರೆ ಎಂದು ಶ್ರೀಗಳು ಭವಿಷ್ಯ ನುಡಿದರು.
ಮಠವು ಎಂದಿಗೂ ರಾಜಕೀಯ ವಿಚಾರಗಳಲ್ಲಿ ಸಲಹೆ ನೀಡುವುದಿಲ್ಲ. ರಾಜಕೀಯದಲ್ಲಿ ಧರ್ಮವನ್ನು ಬೆರೆಸದೆ, ಮಾನವ ಸೇವೆಯ ಮಾರ್ಗವನ್ನು ಮಾತ್ರ ಸೂಚಿಸುತ್ತೇವೆ. ಡಿಕೆಶಿ ಸರಳ, ಸಜ್ಜನಿಕೆ ಹಾಗೂ ಮಾತೃ ಹೃದಯ ಹೊಂದಿರುವ ವ್ಯಕ್ತಿ ಎಂದು ಶಿವಯೋಗಿಶ್ವರ್ ಶ್ರೀಗಳು ಹೇಳಿದರು.































































































































