ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಬಾಲಕಿಯರ, ಎರಡೂ ತಂಡಗಳು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

ಕಾರ್ಕಳ: ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ
ಸರಕಾರ, ಇದರ ವತಿಯಿಂದ ಸರಕಾರಿ ಪದವಿಪೂರ್ವ
ಕಾಲೇಜು ಹೆಬ್ರಿ ಇಲ್ಲಿ ನಡೆದ ಪ್ರಾಥಮಿಕ ಮತ್ತು
ಪ್ರೌಢಶಾಲಾ ವಿಭಾಗದ ಉಡುಪಿ ಜಿಲ್ಲಾಮಟ್ಟದ
ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳ
ಕ್ರೈಸ್ಟ್ ಕಿಂಗ್ ಆಂಗ್ಲ ಪ್ರಾಥಮಿಕ ಶಾಲಾ
ಬಾಲಕಿಯರ ತಂಡ ಹಾಗೂ ಪ್ರೌಢಶಾಲಾ ಬಾಲಕಿಯರ
ತಂಡಗಳು ಪ್ರಥಮ ಸ್ಥಾನ ಪಡೆದುಕೊಂಡು
ಮೈಸೂರು ವಿಭಾಗ ಮಟ್ಟದ ಪಂದ್ಯಾಟಕ್ಕೆ
ಆಯ್ಕೆಯಾಗಿವೆ.
ಈ ಮೂಲಕ ಸಂಸ್ಥೆಯೊಂದರ
ಪ್ರೌಢ ಮತ್ತು ಪ್ರಾಥಮಿಕ ವಿಭಾಗದ ಬಾಲಕಿಯರ
ಎರಡೂ ತಂಡಗಳು ಮೈಸೂರು ವಿಭಾಗ ಮಟ್ಟಕ್ಕೆ
ಆಯ್ಕೆಯಾಗಿ ದಾಖಲೆ ಬರೆದಂತಾಗಿದೆ. ಪ್ರೌಢಶಾಲಾ
ಬಾಲಕಿಯರ ತಂಡವನ್ನು ಹತ್ತನೇ ತರಗತಿಯ
ಶಗುನ್ ಎಸ್ ವರ್ಮ ಹೆಗ್ಡೆ, ಶೈನಿ ಡಿಸೋಜ, ಒಂಬತ್ತನೇ
ತರಗತಿಯ ಪಾವನಿ, ಐಶ್ವರ್ಯ, ಎಂಟನೇ
ತರಗತಿಯ ಮಾನ್ವಿ, ಅನುರಾಧ ಆರ್ ಪೂಜಾರಿ, ಸಿದ್ಧಿ
ವಸಂತ ಮಡಿವಾಳ ಪ್ರತಿನಿಧಿಸಿ ವಿಭಾಗಮಟ್ಟಕ್ಕೆ
ಆಯ್ಕೆಯಾಗಿದ್ದಾರೆ.
ಪ್ರಾಥಮಿಕ ಶಾಲಾ ತಂಡವನ್ನು
ಏಳನೇ ತರಗತಿಯ ತ್ರಿಷ್ಮ, ಸೃಷ್ಟಿ ಎಸ್ ಪೂಜಾರಿ,
ಕೇಟ್ಲಿನ್ ಏಂಜಲ್ ಪಿಂಟೊ, ಎಲ್ಸ ರುಬೇಲ್ ಡಿಸೋಜ, ಪ್ರನ್ವಿ
ಎಸ್ ದೇವಾಡಿಗ ಹಾಗೂ ಆರನೇ ತರಗತಿಯ ನಿಶಾ
ಡಿಸೋಜ, ಅಲಿಷ ಡಿಸೋಜ ಪ್ರತಿನಿಧಿಸಿ ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಪೂರ್ವ
ಸಾಧನೆಗೈದ ವಿದ್ಯಾರ್ಥಿನಿಯರನ್ನು ಸಂಸ್ಥೆಯ
ಆಡಳಿತ ಮಂಡಳಿಯವರು, ಮುಖ್ಯಸ್ಥರು,
ಶಿಕ್ಷಕರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.































































































































