
ನಾಗ್ಪುರ : ಭಾನುವಾರ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಮ್ಮೇಳನವೊಂದರಲ್ಲಿ ಮಾತನಾಡಿ ಜನಸಂಖ್ಯೆ ಬೆಳವಣಿಗೆ ದರವು 2.1ಕ್ಕಿಂತ ಕಡಿಮೆಯಾದರೆ, ಸಮಾಜವು ನಾಶವಾಗುತ್ತದೆ. ಪ್ರತಿ ದಂಪತಿ ಕನಿಷ್ಠ 3 ಮಕ್ಕಳ ಹೆರಬೇಕು ಎಂದು ಕರೆ ನೀಡಿದ್ದಾರೆ.
ಸಮಾಜವು ಬದುಕಬೇಕೆಂದರೆ ನಾವು 2ಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯಬೇಕು, ಅಂದರೆ ಕನಿಷ್ಠ ಮೂರು ಜನ ಮಕ್ಕಳನ್ನು ಪಡೆಯಬೇಕು ಎಂದು ಜನಸಂಖ್ಯಾ ವಿಜ್ಞಾನ ಹೇಳುತ್ತದೆ. ಜನಸಂಖ್ಯಾ ಬೆಳವಣಿಗೆ ದರ 2.1ಕ್ಕಿಂತ ಕಡಿಮೆ ಆದರೆ ಸಮಾಜ ನಾಶವಾಗುತ್ತದೆ ಎಂದು ಹೇಳಿದರು.



















