
ಕಾರ್ಕಳ: ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಸುಲೋಚನಾ ಪಚ್ಚಿನಡ್ಕ ಬರೆದ ಮಾನವತಾವಾದಿ, ಶಿಕ್ಷಣ ಪ್ರೇಮಿ,
ದಲಿತೋದ್ಧಾರಕರಾದ ಕುದ್ಮುಲ್ ರಂಗರಾಯರ ಬಗೆಗಿನ ಕೃತಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಇತ್ತೀಚೆಗೆ ಬೆಂಗಳೂರು ವಿಧಾನ ಸೌಧದ
ಬ್ಯಾಂಕ್ವಿಟ್ ಹಾಲ್‌ನಲ್ಲಿ ಬಿಡುಗಡೆಗೊಳಿಸಿದರು.
ಕನ್ನಡ ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಕಾರ್ಯದರ್ಶಿ ಸಂತೋಷ
ಹಾನಗಲ್, ನಾಡೋಜ ಬರಗೂರು ರಾಮಚಂದ್ರಪ್ಪ, ಶಾಸಕರಾದ ರಿಜ್ವಾನ್ ಅರ್ಷದ್, ಪರಿಷತ್ತಿನ ಸದಸ್ಯ ಎಸ್.ಎಲ್.ಭೋಜೇಗೌಡ, ಮುಖ್ಯಮಂತ್ರಿಗಳ
ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಮಂಜುನಾಥ್, ಲೇಖಕಿ ಸುಲೋಚನಾ ಪಚ್ಚಿನಡ್ಕ ಉಪಸ್ಥಿತರಿದ್ದರು.
ಇದು ಸುಲೋಚನಾ ಪಚ್ಚಿನಡ್ಕ ಅವರ ಎಂಟನೆಯ ಕೃತಿ ಆಗಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಾಮರಸ್ಯದ ನೆಲೆಗಳು ಯೋಜನೆಯಡಿಯಲ್ಲಿ
ಪ್ರಕಟಗೊಂಡ 41 ಕೃತಿಗಳಲ್ಲಿ ಒಂದಾಗಿದೆ.













