“ಕಲಿಕೆಯ ಜೊತೆಜೊತೆಗೆ ಜೀವನ ಮೌಲ್ಯಗಳು ವಿದ್ಯಾರ್ಥಿಗಳ ಬದುಕಿಗೆ ಭದ್ರ ಅಡಿಪಾಯ- ಡಾ.ಜಗದೀಶ್ ಶೆಟ್ಟಿ

ಏಪ್ರಿಲ್ 21 ರಂದು ಕಾರ್ಕಳದ ಪ್ರತಿಷ್ಠಿತ ಎಂಪಿಎಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು .

ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಜಗದೀಶ್ ಶೆಟ್ಟಿ ಆಡಳಿತ ಅಧಿಕಾರಿ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ ಮತ್ತು ನಿವೃತ್ತ ಪ್ರಾಂಶುಪಾಲರು, ಪೂರ್ಣಪ್ರಜ್ಞ ಕಾಲೇಜು ಉಡುಪಿ. ಇವರು ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. “ಕಲಿಕೆಯ ಜೊತೆಜೊತೆಗೆ ಜೀವನ ಮೌಲ್ಯಗಳು ವಿದ್ಯಾರ್ಥಿಗಳ ಬದುಕಿಗೆ ಭದ್ರ ಅಡಿಪಾಯಗಳಾಗುತ್ತವೆ “ಎಂದು ತಮ್ಮ ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು .
ಅಧ್ಯಕ್ಷತೆಯನ್ನು ವಹಿಸಿದ ಡಾ. ಸುರೇಶ್ ರೈ .ಕೆ ಇವರು ಇದು ವಿದ್ಯಾರ್ಥಿಗಳ ಪರಿಶ್ರಮ, ಶ್ರದ್ಧೆ ಶಿಸ್ತುಗಳ, ಸಂಭ್ರಮದ ಆಚರಣೆ ಎಂದು ಹೇಳಿದರು .ನಂತರ ಶೈಕ್ಷಣಿಕ,ಸಾಂಸ್ಕೃತಿಕ ಹಾಗು ಕ್ರೀಡೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀಮತಿ ಸೌಮ್ಯ ಹೆಚ್ ಕೆ ಸಂಚಾಲಕರು, ಸಾಂಸ್ಕೃತಿಕ ಸಂಘ ,ಡಾ. ಜಯಭಾರತಿ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ವಿದ್ಯಾರ್ಥಿ ಕಾರ್ಯದರ್ಶಿಗಳಾದ ಧನುಷ್ ಪ್ರಣೇಶ್,ವಿಖ್ಯಾತ,ಶ್ರೀ ರಕ್ಷಾ, ಸೂರಜ್,ವಿನಯ್ ಉಮೇಶ್ ಉಪಸ್ಥಿತರಿದ್ದರು. ಡಾ.ಚಂದ್ರಾವತಿ ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿ ಸ್ವಾಗತಿಸಿದರು. ಭಾಗ್ಯಲಕ್ಷ್ಮಿ ರಾಜ್ಯಶಾಸ್ತ್ರ ಸಹ ಪ್ರಾಧ್ಯಾಪಕರು ವಂದಿಸಿದರು. ವಿಖ್ಯಾತ ದ್ವಿತೀಯ ಬಿ.ಸಿ. ಎ ಹಾಗೂ ಶರಣ್ಯ ದ್ವಿತೀಯ ಎಂಕಾಂ ಕಾರ್ಯಕ್ರಮವನ್ನು ನಿರೂಪಿಸಿದರು.





















































































