
ಕಾರ್ಕಳ, ಎ.17: ಶ್ರೀ ಭುವನೇಂದ್ರ ರೆಸಿಡೆನ್ಸಿಯಲ್ ಸ್ಕೂಲ್ ಸಿ.ಬಿ.ಎಸ್.ಇ. 10ನೇ ತರಗತಿ ಪರೀಕ್ಷೆಯಲ್ಲಿ ಮಕ್ಕಳು ಉತ್ತಮ ಫಲಿತಾಂಶ ದಾಖಲಿಸಿದ್ದಾರೆ. 2025-26ನೇ ಶೈಕ್ಷಣಿಕ ವರ್ಷದ ಸಾಲಿನ ಪರೀಕ್ಷೆಗೆ ಹಾಜರಾದ 84 ವಿದ್ಯಾರ್ಥಿಗಳ ಪೈಕಿ 14 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಸೌರಭ್ ಎಸ್. ಪುತ್ರನ್ ಶೇ. 93.80 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಮಾನಸಿ ಎನ್. ಕಾಮತ್ ಶೇ. 92.80 ಅಂಕಗಳೊಂದಿಗೆ ದ್ವಿತೀಯ ಸ್ಥಾನ, ಸೃಜಲಿ ಎಸ್. ಶೆಟ್ಟಿ ಶೇ. 92.40 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ಸಮರ್ಥ್ ರಾಮಕೃಷ್ಣ ನಾಯ್ಕ್ ಮತ್ತು ಸ್ನಿಗ್ಧ ಎ. ಇವರು ಕನ್ನಡ ಭಾಷೆಯಲ್ಲಿ ಪರಿಪೂರ್ಣ 100 ಅಂಕ ಗಳಿಸಿದ್ದಾರೆ.
1 ಸೌರಭ್ ಎಸ್. ಪುತ್ರನ್ ಶೇ. 93.80
2 ಮಾನಸಿ ಎನ್. ಕಾಮತ್ ಶೇ. 92.80
3 ಸೃಜಲಿ ಎಸ್. ಶೆಟ್ಟಿ ಶೇ. 92.40
4 ಸಮರ್ಥ್ ರಾಮಕೃಷ್ಣ ನಾಯ್ಕ್ ಶೇ. 92.00
5 ಮುತ್ತುರಾಜ್ ಭರಮಪ್ಪ ಬಾಳಿಗಾರ್ ಶೇ. 90.20
6 ಪೂರ್ವಿ ಚೆನ್ನಪ್ಪ ಅಥಣಿ ಶೇ. 90.20
7 ಭುವನ್ ಸುರೇಶ್ ಮಾಲಾಜಿ ಶೇ. 89.20
8 ಸಮರ್ಥ್ ಎಸ್. ನಾಡಿಗ್ ಶೇ. 89.20
9 ನವಾಜ್ ನಜೀರ್ ಪತಾಯತ್ ಶೇ. 88.60
10 ಪ್ರದ್ಯೋತ್ ಎಸ್. ಕೆ. ಶೇ. 88.00
11 ಅಶೋನ ರವಿವರ್ಮ ಕನ್ನಮಡಿ ಶೇ. 87.40
12 ದೈವಿಕ್ ಬಾಲಕೃಷ್ಣ ಸಾಲಿಯಾನ್ ಶೇ. 85.20
13 ಗಂಗಾ ಎಂ. ಶೆಟ್ಟಿ ಶೇ. 85.00
14 ಸ್ನಿಗ್ಧ ಎ. ಶೇ. 84.60
ಶಾಲಾಡಳಿತ ಮಂಡಳಿ, ಶ್ರೀ ಭುವನೇಂದ್ರ ಕಾಲೇಜು ಟ್ರಸ್ಟ್, ಪ್ರಾಂಶುಪಾಲರು, ಉಪನ್ಯಾಸಕ ವರ್ಗ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.













