ಜಾಲಿ ಬಾಯ್ಸ್ ಬಜೆಗೋಳಿ, ಹಾಗೂ ದಾನಿಗಳಿಂದ ಸಮವಸ್ತ್ರ ಮತ್ತು ಶೈಕ್ಷಣಿಕ ಪರಿಕರಗಳ ವಿತರಣೆ

ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿ ದಿನಾಂಕ ಜೂನ್16 2026 ರಂದು ಜಾಲಿ ಬಾಯ್ಸ್ ಬಜೆಗೋಳಿ ಹಾಗೂ ವಿವಿಧ ದಾನಿಗಳಿಂದ ಸಮವಸ್ತ್ರ ಮತ್ತು ಶೈಕ್ಷಣಿಕ ಪರಿಕರಗಳ ವಿತರಣಾ ಕಾರ್ಯಕ್ರಮ ಮತ್ತು ನೂತನವಾಗಿ ಆರಂಭವಾಗಲಿರುವ ಎಐ ತರಗತಿಗಳ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಲಾಯಿತು.
ವೇದಿಕೆಯಲ್ಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀಯುತ ಗಜಾನನ ಮರಾಠೆ ಇವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿರುವ ಶ್ರೀಯುತ ಗುರುರಾಜ ಮ್ಯಾನೇಜಿಂಗ್ ಡೈರೆಕ್ಟರ್ ಅಂಡ್ ಫೌಂಡರ್ ಆಫ್ ಜನರೇಶನ್ ನೆಕ್ಸ್ಟ್, ಶ್ರೀಮತಿ ಸಂಜನಾ ಮರಾಠೆ ಹಾಗೂ ಉಚಿತ ನೋಟ್ ಪುಸ್ತಕಗಳ ಪ್ರಾಯೋಜಕರಾದ ಜಾಲಿ ಬಾಯ್ಸ್ ಬಜೆಗೋಳಿ ಇದರ ಮುಖ್ಯಸ್ಥರಾಗಿರುವ ಶ್ರೀಯುತ ರಜತ್ ರಾಮ್ ಮೋಹನ್, ಶ್ರೀಯುತ ಸತೀಶ್ ಮರಾಠೆ, ಶ್ರೀಯುತ ಪ್ರಶಾಂತ್ ಕೋಟ್ಯಾನ್, ಮತ್ತು ಶ್ರೀಯುತ ಸುರೇಶ್ ಕುಮಾರ್ ಎ ಐ ತರಬೇತುದಾರರು, ಶ್ರೀಮತಿ ಗುಣ ಶಿಲ್ಪ ಎ ಐ ತರಬೇತಿದಾರರು, ವಿ.ಎಮ್ ಮೈಕಲ್,ಶಾಲಾ ಸಂಚಾಲಕರಾದ ಶ್ರೀಯುತ ಸುಧಾಕರ ಡೊಂಗ್ರೆ, ಹಾಗೂ ಶಾಲಾ ಮುಖ್ಯೋಪಾಧ್ಯಯರಾದ ಶ್ರೀಮತಿ ಪೂರ್ಣಿಮಾ ಶೆಣೈ ಇವರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದರು.
ಎರಡು ವರ್ಷಗಳಿಂದ ಜಾಲಿ ಬಾಯ್ಸ್ ಬಜೆಗೋಳಿ ತಂಡದವರು ಉಚಿತ ನೋಟ್ ಪುಸ್ತಕವನ್ನು ನೀಡುತ್ತಿದ್ದು, ಈ ಸಲ ಸುಮಾರು 86 ಸಾವಿರ ರೂಪಾಯಿ ಮೌಲ್ಯದ ನೋಟ್ ಪುಸ್ತಕಗಳನ್ನು ನೀಡಿರುತ್ತಾರೆ.
ಈ ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿಗಳಾದ ಶ್ರೀಯುತ ರವೀಂದ್ರನಾಥ್ ಜೋಶಿ,ಆಡಳಿತ ಮಂಡಳಿಯ ಸದಸ್ಯರಾದ ಶ್ರೀಯುತ ರಾಮಸೇರಿಗಾರ್,ಶ್ರೀಯುತ ರಘುಪತಿ ಕಾಮತ್, ಮತ್ತು ಶ್ರೀಯುತ ಸುಧೀಶ್ ಶೆಟ್ಟಿ ,ಶಾಲಾ ಪೋಷಕರು , ಶಿಕ್ಷಕ ವೃಂದದವರು , ವಿದ್ಯಾರ್ಥಿಗಳು ಭಾಗವಹಿಸಿದರು.
ಶಿಕ್ಷಕಿ ಶ್ರೀಮತಿ ಶೋಭಾ ಇವರು ಕಾರ್ಯಕ್ರಮವನ್ನು ನೀರೂಪಿಸಿ,ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಮುಖ್ಯಪಾಧ್ಯಾಯರಾದ ಶ್ರೀಮತಿ ಪೂರ್ಣಿಮಾ ಶೆಣೈ ಇವರು ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಜ್ಯೋತಿ ಇವರು ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ವಂದನಾರ್ಪಣೆ ಗೈದರು.

































