
ಬೆಂಗಳೂರು: ಸಮಾಜ ಸೇವೆ, ಶಿಕ್ಷಣ, ಸಂಸ್ಕೃತಿ ಹಾಗೂ ಜನೋಪಯೋಗಿ ಕ್ಷೇತ್ರಗಳಲ್ಲಿ ನೀಡಿದ ನಿರಂತರ ಸೇವೆಯನ್ನು ಗುರುತಿಸಿ ಶೋಭಾ ಭಾಸ್ಕರ್ ಅವರಿಗೆ ಪ್ರತಿಷ್ಠಿತ ‘ಸಮಾಜ ಸೇವಾಸಿರಿ ಪ್ರಶಸ್ತಿ’ ಪ್ರದಾನ ಮಾಡಲಾಗಿದೆ.
ಹುಟ್ಟೂರಿನ ಸಂಪಾಜೆ ರಂಗ ಸಂಗಮ (ರಿ.), ಬೆಂಗಳೂರು ವತಿಯಿಂದ ಬೆಂಗಳೂರಿನ ನಯನ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಸಮಾಜಮುಖಿ ಚಟುವಟಿಕೆಗಳಲ್ಲಿ ಅವರ ತೊಡಗಿಸಿಕೊಳ್ಳುವಿಕೆ, ಸೇವಾ ಮನೋಭಾವ, ಪರಿಶ್ರಮ ಹಾಗೂ ಸಮಾಜದ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಘಟನೆಯವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶೋಭಾ ಭಾಸ್ಕರ್ ಅವರ ಸೇವಾ ಕಾರ್ಯಗಳು ಮುಂದಿನ ದಿನಗಳಲ್ಲೂ ಇನ್ನಷ್ಟು ವಿಸ್ತರಿಸಿ ಸಮಾಜಕ್ಕೆ ಪ್ರೇರಣೆಯಾಗಲಿ ಎಂದು ಶುಭ ಹಾರೈಸಲಾಯಿತು.


































