ಕಾರ್ಕಳ ತಾಲೂಕು ಮಟ್ಟದ ಆರ್.ಬಿ.ಎಸ್.ಕೆ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ

ಕಾರ್ಕಳ: 0-18 ವರ್ಷದೊಳಗಿನ ಮಕ್ಕಳ ಆರೋಗ್ಯ ಕಾಪಾಡುವಲ್ಲಿ
(ರಾಷ್ಟ್ರೀಯ ಬಾಲ ಸ್ವಾಸ್ತ್ಯ ಕಾರ್ಯಕ್ರಮ) ಪ್ರಮುಖ ಪಾತ್ರ ವಹಿಸುತ್ತದೆ. ಇದು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು ಎಂದು ಆರೋಗ್ಯ ಇಲಾಖೆ ಹಾಗೂ ಮತ್ತಿತರ ಲೈನ್ ಡಿಪಾರ್ಟ್‌ಮೆಂಟ್ ಗಳಿಗೆ ತಹಶಿಲ್ದಾರ್ ಖಡಕ್ ಸೂಚನೆ ನೀಡಿದ್ದಾರೆ.
ಇಂದು ತಹಶಿಲ್ದಾರ್ ಕಚೇರಿಯಲ್ಲಿ ತಹಶಿಲ್ದಾರ್ ರವರ ಅಧ್ಯಕ್ಷತೆಯಲ್ಲಿ ಆರ್ .ಬಿ ಎಸ್ .ಕೆ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಪ್ರಗತಿ ಪರಿಶೀಲನೆ ನಡೆಸಿದ ಡಾ.ಪ್ರತಿಭಾ ಆರ್ ರವರು ವೈದ್ಯರುಗಳು ತಮ್ಮ ತಂಡದೊಂದಿಗೆ ಅಂಗನವಾಡಿ ಮತ್ತು ಶಾಲೆಗಳಿಗೆ ಹೆಲ್ತ್ ಸ್ಕ್ರೀನಿಂಗ್ ಗೆ ತೆರಳಿದಾಗ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಸಭೆಯಲ್ಲಿ ತಹಶೀಲ್ದಾರ್ ಡಾ. ಪ್ರತಿಭಾ ಆರ್ ಈ ಕೆಳಗಿನ ನಿರ್ದೇಶನಗಳನ್ನು ನೀಡಿರುತ್ತಾರೆ.
ಮಕ್ಕಳ ಆರೋಗ್ಯ ತಪಾಸಣೆ ಮಾಡಿ, ತೀವ್ರತರ ಕಾಯಿಲೆಗಳು ಕಂಡು ಬಂದ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆಗೆ ಮುಂದಾಗಬೇಕು. ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇದ್ದ ಮಕ್ಕಳಿಗೆ ಆರ್ ಬಿ ಎಸ್ ಕೆ ಅಡಿಯಲ್ಲಿ ಉಚಿತ ಶಸ್ತ್ರ ಚಿಕಿತ್ಸೆಗೆ ಕ್ರಮವಹಿಸಬೇಕು ಎಂದು ತಹಶಿಲ್ದಾರ್ ತಿಳಿಸಿದರು.
ವೈದ್ಯರ ತಂಡ ಪರಿಣಾಮಕಾರಿ ಹೆಲ್ತ್ ಚೆಕಪ್ ಮಾಡಬೇಕು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಕ್ಕಳ ಹೆಲ್ತ್ ಹಿಸ್ಟರಿ ಸೂಕ್ತವಾಗಿ ತಿಳಿಸಬೇಕು.
ಶಾಲಾ ಮುಖ್ಯಸ್ಥರು ಹೆಲ್ತ್ ಚೆಕಪ್ ದಿನ 100% ಹಾಜರಾತಿ ಇರುವಂತೆ ನೋಡಿಕೊಂಡು ಸಹಕರಿಸಬೇಕು
ಅಂಗನವಾಡಿ ಮತ್ತು ಶಾಲಾಮಕ್ಕಳ ತಪಾಸಣೆಯನ್ನು ಆದ್ಯತೆಯ ಮೇರೆಗೆ ಕೈಗೊಳ್ಳಬೇಕು. ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇದ್ದ ಪಕ್ಷದಲ್ಲಿ ಪೋಷಕರ ಮನವೊಲಿಸಿ ಉಚಿತ ಚಿಕಿತ್ಸೆಯ ಬಗ್ಗೆ ಮನವರಿಕೆ ಮಾಡಿಕೊಟ್ಟು ಮಕ್ಕಳು ಶಾಶ್ವತ ಅಂಗವಿಕಲತೆಗೆ ಒಳಗಾಗದಂತೆ ಎಚ್ಚರಿಕೆ ವಹಿಸಬೇಕು.
ಕಾರ್ಕಳ ತಾಲೂಕಿನಲ್ಲಿ ಕಂಡು ಬಂದ ಮಕ್ಕಳ ಆರೋಗ್ಯ ಸಮಸ್ಯೆ:
ಸೀಳುದುಟಿ, ಹೃದಯದಲ್ಲಿ ರಂಧ್ರ, ಮೆಳ್ಳಗಣ್ಣು, ಮೂಳೆದೋಷ, ಕಿವುಡುತನ ಇತ್ಯಾದಿ.
ಇಂತಹ ಕೇಸ್ ಗಳಲ್ಲಿ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದು ವೈದ್ಯರು ನಿರಂತರ ಮಕ್ಕಳನ್ನು ನೋಡಿಕೊಂಡು ಗುಣಪಡಿಸಬೇಕು ಎಂದು ತಹಶಿಲ್ದಾರ್ ತಿಳಿಸಿರುತ್ತಾರೆ.
ದಿವ್ಯಾಂಗರಲ್ಲಿ ಆತ್ಮವಿಶ್ವಾಸ ತುಂಬಿರಿ.:
ಅಂಗವೈಕಲ್ಯ ಹೊಂದಿರುವ ಮಕ್ಕಳಲ್ಲಿನ ಕೀಳರಿಮೆ ಹೋಗಲಾಡಿಸಿ ಅವರಿಗೂ ಮುಖ್ಯ ವಾಹಿನಿಯಲ್ಲಿ ಬೆರೆಯಲು ಅವಕಾಶ ನೀಡಿ
ಆತ್ಮವಿಶ್ವಾಸ ತುಂಬಬೇಕು ಎಂದರು.
ಮಗು ಚಿಕ್ಕದಿರುವಾಗಲೇ ಕಾಯಿಲೆ- ಅಂಗವೈಕಲ್ಯ ಪತ್ತೆಹಚ್ಚಿ:
ಎಳೆಯ ವಯಸ್ಸಿನಲ್ಲಿಯೇ ಪತ್ತೆ ಮಾಡುವುದರಿಂದ ಚಿಕಿತ್ಸೆ ಸುಲಭ ಮತ್ತು ಪರಿಣಾಮಕಾರಿ.
ಆರ್ ಬಿ ಎಸ್ ಕೆ ಅಡಿಯಲ್ಲಿ
ಸಂಪೂರ್ಣ ಚಿಕಿತ್ಸೆ ಉಚಿತ. ಶಸ್ತ್ರ ಚಿಕಿತ್ಸೆ ಉಚಿತ ಲಸಿಕಾ ಕಾರ್ಯಕ್ರಮ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸೂಚನೆ:.ದಡಾರ, ರುಬೆಲ್ಲಾ ಮತ್ತು ವಯಸ್ಕರ ಬಿಸಿಜಿ ಲಸಿಕಾಕರಣ ಪರಿಣಾಮಕಾರಿಯಾಗಿ ಜಾರಿಗೊಳಿಸಲು ತಹಶಿಲ್ದಾರ್ ಸೂಚನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು 5 ವರ್ಷದೊಳಗಿನ ಮಕ್ಕಳು ಲಸಿಕೆ ಪಡೆಯುವಂತೆ ಕ್ರಮವಹಿಸಬೇಕು. ಯಾರೂ ಹೊರಗುಳಿಯದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ಪುರಸಭೆ ಮತ್ತು ಪಂಚಾಯತಿಗಳು ಲಸಿಕೆಯ ಬಗ್ಗೆ ಸೂಕ್ತ ಪ್ರಚಾರ ನೀಡಬೇಕು.ಅಡಲ್ಟ್ ಬಿಸಿಜಿ ಬಗ್ಗೆ ಅಗತ್ಯ ಪ್ರಚಾರ ನೀಡಲು ಸೂಚಿಸಲಾಯಿತು.
ಡೆಂಗ್ಯೂ ಮತ್ತು ಕಾಲರಾ ರೋಗ ಹರಡದಂತೆ ಸೂಕ್ತ ಕ್ರಮಗಳನ್ನು ವಹಿಸಲು ಸೂಚನೆ ನೀಡಲಾಯಿತು.ಸಭೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಸಂತೋಷ್ ಕುಡ್ವ ವಿಷಯ ಸಮನ್ವಯಗೊಳಿಸಿದರು.
ಸಭೆಯಲ್ಲಿ ತಾಲೂಕಿನ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಶಾಲಾಶಿಕ್ಷಣ ಇಲಾಖೆ ಅಧಿಕಾರಿ, ಕಾರ್ಮಿಕ ಇಲಾಖೆ ಅಧಿಕಾರಿ, ಸಿಡಿಪಿಓ, ಪುರಸಭೆ ಅಧಿಕಾರಿ, ತಾಲೂಕು ಪಂಚಾಯತ್ ಅಧಿಕಾರಿ ಇತ್ಯಾದಿ ಉಪಸ್ಥಿತರಿದ್ದರು.













