
ದಿನದಿಂದ ದಿನಕ್ಕೆ ಈರುಳ್ಳಿ ದರ ಏರಿಕೆ ಕಂಡಿದ್ದು ಇದೀಗ ಮಾರುಕಟ್ಟೆಯಲ್ಲಿ ಈರುಳ್ಳಿ ಕೆಜಿಗೆ 75 ರಿಂದ 80 ರೂ. ಮಾರಾಟವಾಗಿದೆ.
ರಾಜ್ಯದಲ್ಲಿ ಮಳೆಯಿಂದಾಗಿ ಈರುಳ್ಳಿ ಬೆಳೆ ನಾಶವಾಗಿದ್ದು ಬೆಲೆ ಏರಿಕೆಗೆ ಕಾರಣವಾಗಿದೆ. ಇದೀಗ ಈರುಳ್ಳಿ ದರದಲ್ಲಿ ಏರಿಕೆ ಕಂಡಿರುವ ಕಾರಣ ತೇವಾಂಶ ಇರುವ ಈರುಳ್ಳಿಯನ್ನು ರೈತರು ಮಾರುಕಟ್ಟೆಗೆ ತರುತ್ತಿದ್ದಾರೆ ಎಂದು ವರ್ತಕರು ತಿಳಿಸಿದ್ದಾರೆ. ಸ್ಪರ್ಧಾ ರೀತಿಯಲ್ಲಿ ಏರಿಕೆ ಕಂಡಿರುವ ತರಕಾರಿ ಬೆಲೆಗಳಿಂದಾಗಿ ಜನ ಕಂಗಾಲಾಗುವಂತಾಗಿದೆ.













