31.4 C
Udupi
Sunday, April 19, 2026
spot_img
spot_img
HomeBlogನಾರಿಶಕ್ತಿ ಮಸೂದೆ ವಿಫಲ: ಮಹಿಳೆಯರ ಬಳಿ ಕ್ಷಮೆ ಯಾಚಿಸಿದ ಪ್ರಧಾನಿ ಮೋದಿ

ನಾರಿಶಕ್ತಿ ಮಸೂದೆ ವಿಫಲ: ಮಹಿಳೆಯರ ಬಳಿ ಕ್ಷಮೆ ಯಾಚಿಸಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನಾರಿಶಕ್ತಿ ವಂದನಾ ಮಸೂದೆ ಅಂಗೀಕಾರವಾಗದ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿ ಮಸೂದೆ ವಿಫಲವಾದುದಕ್ಕೆ ಮಹಿಳೆಯರ ಬಳಿ ಕ್ಷಮೆಯಾಚಿಸಿ, ಈ ಘಟನೆ ತನ್ನಿಗೆ ವೈಯಕ್ತಿಕವಾಗಿ ಬೇಸರ ತಂದಿದೆ ಎಂದು ಹೇಳಿದರು.

ವಿಪಕ್ಷಗಳಾದ ಕಾಂಗ್ರೆಸ್, ಡಿಎಂಕೆ ಮತ್ತು ಟಿಎಂಸಿ ಮಸೂದೆಗೆ ವಿರೋಧ ವ್ಯಕ್ತಪಡಿಸಿರುವುದನ್ನು ತೀವ್ರವಾಗಿ ಟೀಕಿಸಿದ ಅವರು ಮಹಿಳೆಯರ ಹಕ್ಕುಗಳಿಗೆ ಧಕ್ಕೆ ತಂದಿದ್ದುದು ಈ ಪಕ್ಷಗಳೇ ಎಂದು ಆರೋಪಿಸಿ, 21ನೇ ಶತಮಾನದ ಮಹಿಳೆಯರು ಇದನ್ನು ಮರೆಯುವುದಿಲ್ಲ ಎಂದರು.

ಈ ಮಸೂದೆ ಯಾರ ಹಕ್ಕನ್ನೂ ಕಿತ್ತುಕೊಳ್ಳದೇ ಎಲ್ಲರಿಗೂ ಅವಕಾಶ ಕಲ್ಪಿಸುವ ಉದ್ದೇಶ ಹೊಂದಿತ್ತು. ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿದ್ದರೂ, ವಿಪಕ್ಷಗಳು ಅದನ್ನು ಅಡ್ಡಿಪಡಿಸಿದವು ಎಂದು ಹೇಳಿದರು.

ಮಸೂದೆಗೆ ಅಗತ್ಯವಾದ ಮೂರರಲ್ಲಿ ಎರಡು ಭಾಗದ ಬಹುಮತ ಸಿಗದೇ ಸೋಲು ಕಂಡಿತು. ಪರವಾಗಿ 298 ಮತಗಳು ಬಂದರೆ, 230 ಸದಸ್ಯರು ವಿರೋಧಿಸಿದರು. ಆದರೂ ಮಹಿಳಾ ಸಬಲೀಕರಣದ ಹೋರಾಟವನ್ನು ಮುಂದುವರಿಸಲಾಗುತ್ತದೆ ಎಂದು ಪ್ರಧಾನಿ ಭರವಸೆ ನೀಡಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page