
ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ ಇಂದು ಮೂರನೇ ಹಂತದ ನಾಮಫಲಕ ಸ್ವಚ್ಛತಾ ಅಭಿಯಾನ ಯಶಸ್ವಿಯಾಗಿ ನಡೆಯಿತು.
ಈ ಅಭಿಯಾನದಡಿ ಕಲ್ಲೊಟ್ಟೆ ಪ್ರದೇಶದ ಸುತ್ತಮುತ್ತಲಿನ ಅಡ್ಡರಸ್ತೆಗಳ ನಾಮಫಲಕಗಳಿಂದ ಪ್ರಾರಂಭಿಸಿ ಪೆರ್ವಾಜೆ ದ್ವಾರದವರೆಗೆ ಇರುವ ಹಲವಾರು ನಾಮಫಲಕಗಳನ್ನು ಸ್ವಚ್ಛಗೊಳಿಸಲಾಯಿತು.

ಇದರೊಂದಿಗೆ, ಕೆಲವೆಡೆ ಹದಗೆಟ್ಟ ರಸ್ತೆಗಳಲ್ಲಿದ್ದ ಗುಂಡಿಗಳನ್ನು ಸ್ವಚ್ಛ, ಬ್ರಿಗೇಡ್ ಕಾರ್ಯಕರ್ತರು ಮಣ್ಣು ತುಂಬಿ ಸಮತಟ್ಟುಗೊಳಿಸುವ ಕಾರ್ಯವೂ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ, ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿನ ಅನೇಕ ರಸ್ತೆಗಳು ಹದಗೆಟ್ಟ ಸ್ಥಿತಿಯಲ್ಲಿರುವುದು ಗಮನಾರ್ಹವಾಗಿದೆ. ರಸ್ತೆಗಳಲ್ಲಿ ಉಂಟಾದ ಗುಂಡಿಗಳು ವಾಹನ ಸವಾರರಿಗೆ ಅಪಾಯಕಾರಿಯಾಗಿದ್ದು, ವಿಶೇಷವಾಗಿ ದ್ವಿಚಕ್ರ ವಾಹನ ಸವಾರರಿಗೆ ಅಪಘಾತದ ಭೀತಿ ಹೆಚ್ಚಿಸಿದೆ.

ಆದ್ದರಿಂದ, ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು ತಕ್ಷಣ ಈ ಸಮಸ್ಯೆಗೆ ಗಮನ ಹರಿಸಿ, ಅಗತ್ಯ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಸ್ವಚ್ಛ ಕಾರ್ಕಳ ಬ್ರಿಗೇಡ್ ಮನವಿ ಮಾಡಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಇದು ಅತ್ಯಂತ ಅವಶ್ಯಕವಾಗಿದೆ.
ಇಂದಿನ ಅಭಿಯಾನದಲ್ಲಿ ಬ್ರಿಗೇಡ್‌ನ ಅನೇಕ ಸ್ವಯಂಸೇವಕರು ಸಕ್ರಿಯವಾಗಿ ಭಾಗವಹಿಸಿ ಸೇವೆ ಸಲ್ಲಿಸಿದರು.













