28.3 C
Udupi
Thursday, April 30, 2026
spot_img
spot_img
HomeBlogದೇಶದ ಭದ್ರತೆಯ ವಿಚಾರದಲ್ಲೂ ಗೋಸುಂಬೆಗಳ ತರಹ ವರ್ತಿಸುವ ಕಾಂಗ್ರೆಸ್ : ರಾಕೇಶ್ ಶೆಟ್ಟಿ, ಕುಕ್ಕುಂದೂರು, ಅಧ್ಯಕ್ಷರು...

ದೇಶದ ಭದ್ರತೆಯ ವಿಚಾರದಲ್ಲೂ ಗೋಸುಂಬೆಗಳ ತರಹ ವರ್ತಿಸುವ ಕಾಂಗ್ರೆಸ್ : ರಾಕೇಶ್ ಶೆಟ್ಟಿ, ಕುಕ್ಕುಂದೂರು, ಅಧ್ಯಕ್ಷರು ಕಾರ್ಕಳ ಬಿಜೆಪಿ ಯುವ ಮೋರ್ಚಾ

ಕಾರ್ಕಳ: ಕಾಶ್ಮಿರದ ಪೆಹಲ್ಗಾಮ್ ನಲ್ಲಿ ಹಿಂದೂಗಳ ಹತ್ಯೆ ದೇಶದ ಭದ್ರತೆ ಮತ್ತು ಭಯೋತ್ಪಾದಕರ ವಿರುದ್ಧದ ಕಠಿಣ ನಿರ್ಧಾರಗಳ ಕುರಿತು ಕಾಂಗ್ರೆಸ್ ಪಕ್ಷ ಗೋಸುಂಬೆ ರೀತಿ ವರ್ತಿಸುತ್ತಿದೆ. ಕಾಂಗ್ರೆಸ್ ಇನ್ನಾದರೂ ನರಿ ಬುದ್ದಿ ಬಿಟ್ಟು ದೇಶದ ಭದ್ರತೆ, ರಕ್ಷಣೆ ವಿಚಾರದಲ್ಲಿ ಒಗ್ಗಟ್ಟಿನ ಸ್ಪಷ್ಟ ನಿಲುವು ಪ್ರಕಟಿಸಲಿ ಎಂದು ಕಾರ್ಕಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ ಕುಕ್ಕುಂದೂರು ಹೇಳಿದ್ದಾರೆ.

ಕಾಂಗ್ರೆಸ್ ವರ್ತನೆ ತೀವೃ ಗೊಂದಲದಲ್ಲಿ ಇದ್ದಂತಿದೆ. ಪೆಹಲ್ಗಾಮ್ ಹಿಂದೂ ನಾಗರಿಕರ ಹತ್ಯೆಗೆ ಕೇಂದ್ರದ ಭದ್ರತಾ ವೈಫಲ್ಯವೆಂದು ಆರಂಭದಲ್ಲಿ ದೂರಿದ ಕಾಂಗ್ರೆಸ್ ನಂತರದಲ್ಲಿ ಯುದ್ಧ ಬದಲು ಶಾಂತಿ ಮಂತ್ರ ಜಪಿಸಿ ಭಯೋತ್ಪಾದಕರ ಪರ ಮೃದು ನಿಲುವು ತಳೆದಿತ್ತು. ಸಿ.ಎಂ ಸಿದ್ಧರಾಮಯ್ಯನವರಂತೂ ಯುದ್ಧ ಬೇಡ’ ಎಂದು ಪಾಕಿಸ್ತಾನ ಪರ ನುಡಿಯ ಹಾರೈಸಿದರು ಎಂದು ಅವರು ಕಿಡಿಕಾರಿದರು. ಕಾಂಗ್ರೆಸ್ ಪಾರ್ಟಿ, ರಾಷ್ಟ್ರೀಯ ಭದ್ರತೆ, ಸೈನಿಕರ ಹಿತಾಸಕ್ತಿ ಅಥವಾ ಪ್ರಧಾನಿಯ ನಿರ್ಧಾರಗಳ ಬಗ್ಗೆ ಬೆಂಬಲ ನೀಡುವ ಬದಲು, ತಪ್ಪು ಪ್ರಶ್ನೆಗಳನ್ನು ಎತ್ತುವ, ಗೊಂದಲ ಹುಟ್ಟಿಸುವ ರಾಜಕಾರಣವನ್ನು ಮಾಡುತ್ತ ಬಂದಿದೆ. ದೇಶ ಭಯೋತ್ಪಾದಕರ ವಿರುದ್ಧ ನಿರ್ಧಾರಾತ್ಮಕ ಕ್ರಮ ಕೈಗೊಂಡಿರುವ ಸಂದರ್ಭದಲ್ಲೂ, ಕಾಂಗ್ರೆಸ್ ದೇಶದ ಬದಿಗೆ ನಿಲ್ಲದೆ ನರಿ ಬುದ್ಧಿಯಲ್ಲಿ ಮುಳುಗಿದೆ. ನಿಜಕ್ಕೂ ಜನತೆ ಈ ನಾಟಕವನ್ನು ಸಹಿಸಲಾರರು ಎಂದ ಅವರು, ಕಾಂಗ್ರೆಸ್ ಪಕ್ಷ ‘ದ್ವಂಧ್ವ ರಾಜಕಾರಣ’ಕ್ಕೆ ಇತಿಶ್ರೀ ಹಾಡಿ ದೇಶ, ಕೇಂದ್ರ ಸರಕಾರ, ಸೈನಿಕರ ಪರ ಒಗ್ಗಟ್ಟಿನ ಕ್ಷಮತೆ ಪಾಲಿಸಿ, ಸರಕಾರದ ನಿರ್ಧಾರವನ್ನು ಬೆಂಬಲಿಸಲಿ ಎಂದು ಆಗ್ರಹಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page