
ಜಮ್ಮುವನ್ನು ಗುರಿಯಾಗಿಸಿ ಮತ್ತೆ ಪಾಕಿಸ್ತಾನ ಕ್ಷಿಪಣಿ ದಾಳಿಗೆ ವಿಫಲ ಯತ್ನ ನಡೆಸಿದೆ ಎಂದು ವರದಿಯಾಗಿದೆ.
ಜಮ್ಮು ವಿಮಾನ ನಿಲ್ದಾಣದ ಬಳಿ ಪಾಕ್ ಡ್ರೋನ್ಗಳ ಮೂಲಕ ದಾಳಿ ನಡೆಸಲು ಯತ್ನಿಸಿದ್ದು, ಎಂಟು ಮಿಸೈಲ್ ಗಳನ್ನು ಮತ್ತು ಪಾಕಿಸ್ತಾನದ ಫೈಟರ್ ಜಟ್ ಎಫ್ 16 ಅನ್ನು ಭಾರತೀಯ ಸೇನಾ ಪಡೆ ಉಡೀಸ್ ಮಾಡಿದೆ ಎಂದು ವರದಿಯಾಗಿದೆ. ಪಾಕಿಸ್ತಾನ ದೇಶದ ವಿವಿದೆಡೆ ವಾಯು ದಾಳಿಯ ವಿಫಲ ಯತ್ನ ನಡೆಸಿದ್ದು, ಭಾರತದ ಎಲ್ಲಾ ವಾಯುನೆಲೆ ಸುರಕ್ಷಿತವಾಗಿದೆ ಎನ್ನುವ ವಿಚಾರಗಳು ವರದಿಯಾಗುತ್ತಿದೆ.
ಜಮ್ಮುವಿನ ನಗರದಲ್ಲಿ ಜೋರಾಗಿ ಸ್ಪೋಟಗಳು ಕೇಳಿ ಬಂದಿದ್ದು, ಆಕಾಶದಲ್ಲಿ ದೀಪಗಳು ಪಸರಿಸಿದಂತೆ ದೃಶ್ಯಗಳನ್ನು ಸ್ಥಳೀಯರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ನಗರದಲ್ಲಿ ತಕ್ಷಣ ವಿದ್ಯುತ್ ಕಡಿತವಾಗಿದ್ದು, ಸೆಲ್ ಫೋನ್ ಸೇವೆ ಸ್ಥಗಿತಗೊಂಡಿದೆ. ಈ ಘಟನೆಯಿಂದ ಜಮ್ಮುವಿನಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ.



















