28.2 C
Udupi
Sunday, July 5, 2026
spot_img
spot_img
HomeBlogಪತಿಯನ್ನು ಕೊಂದು ಬಾತ್‌ರೂಮ್ ಟೈಲ್ಸ್‌ ಕೆಳಗೆ ಹೂತ ಪತ್ನಿ ಬಂಧನ

ಪತಿಯನ್ನು ಕೊಂದು ಬಾತ್‌ರೂಮ್ ಟೈಲ್ಸ್‌ ಕೆಳಗೆ ಹೂತ ಪತ್ನಿ ಬಂಧನ

ಆಗ್ರಾ: ದೇಶದ ವಿವಿಧ ಭಾಗಗಳಲ್ಲಿ ಪತಿಯನ್ನು ಪತ್ನಿಯೇ ಕೊಲೆ ಮಾಡಿದ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆ, ಉತ್ತರ ಪ್ರದೇಶದ ಆಗ್ರಾದಲ್ಲಿ ಮತ್ತೊಂದು ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಪತಿಯನ್ನು ಹತ್ಯೆಗೈದು, ಶವವನ್ನು ಬಾತ್‌ರೂಮ್‌ನ ಟೈಲ್ಸ್‌ ಕೆಳಗೆ ಹೂತುಹಾಕಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಸಿಕಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ ರೇಣುಕಾ ಧಾಮ್ ಕಾಲೋನಿಯ ಮನೆಯಲ್ಲಿ ಸುಮಾರು 45 ದಿನಗಳಿಂದ ನಾಪತ್ತೆಯಾಗಿದ್ದ ಸುರೇಂದ್ರ ಶರ್ಮಾ (45) ಅವರ ಮೃತದೇಹವನ್ನು ಶೌಚಾಲಯದ ನೆಲ ಅಗೆದು ಪೊಲೀಸರು ಪತ್ತೆಹಚ್ಚಿದ್ದಾರೆ.

ಪೊಲೀಸರ ಪ್ರಕಾರ, ಪತ್ನಿ ರೂಬಿ ಶರ್ಮಾ ಪತಿಯನ್ನು ಕೊಲೆಗೈದು, ಶವವನ್ನು ಬಾತ್‌ರೂಮ್ ನೆಲದಡಿ ಹೂತು ಬಳಿಕ ಕಾಂಕ್ರೀಟ್ ಹಾಕಿ ಮುಚ್ಚಿದ್ದರು. ನಂತರ ಪತಿ ಕಾಣೆಯಾಗಿದ್ದಾರೆ ಎಂದು ದೂರು ನೀಡಿ ನಾಟಕವಾಡಿದ್ದರು.

ನಾಪತ್ತೆ ಪ್ರಕರಣದ ತನಿಖೆ ವೇಳೆ ರೂಬಿಯನ್ನು ತೀವ್ರವಾಗಿ ವಿಚಾರಣೆ ನಡೆಸಿದಾಗ, ಆಕೆ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ ಎಂದು ಸಹಾಯಕ ಪೊಲೀಸ್ ಆಯುಕ್ತ ಅಮಿಷಾ ತಿಳಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ಮತ್ತು ಕೊಲೆಯ ವಿಧಾನ ಕುರಿತು ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page