
ಬೆಂಗಳೂರು: ತೃತೀಯ ಭಾಷಾ ವಿಷಯಗಳಿಗೆ ಗ್ರೇಡ್ ಬದಲು ಅಂಕ ನೀಡುವ ವಿಚಾರ ಮತ್ತೆ ಹೈಕೋರ್ಟ್‌ಗೆ ತೆರಳಿರುವ ಹಿನ್ನೆಲೆ, ಏ.24ರಂದು ನಿರೀಕ್ಷಿಸಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಣೆ ವಿಳಂಬವಾಗುವ ಸಾಧ್ಯತೆ ಇದೆ.
ಈ ಸಂಬಂಧ ಮರುಪರಿಶೀಲನಾ ಅರ್ಜಿ ಏ.21ರಂದು ವಿಚಾರಣೆಗೆ ಬರಲಿದ್ದು, ನ್ಯಾಯಾಲಯದ ತೀರ್ಪಿನ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಕುತೂಹಲ ಹೆಚ್ಚಾಗಿದೆ. ತೃತೀಯ ಭಾಷೆಗೆ ಗ್ರೇಡ್ ನೀಡಬೇಕಾ ಅಥವಾ ಅಂಕಗಳನ್ನು ಪರಿಗಣಿಸಬೇಕಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಅಂತಿಮ ಫಲಿತಾಂಶ ಸಿದ್ಧಪಡಿಸಲು ಮಂಡಳಿಗೆ ಅಡಚಣೆ ಎದುರಾಗಿದೆ.
ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಎರಡು ರೀತಿಯ ಫಲಿತಾಂಶ ಸಿದ್ಧಪಡಿಸುವ ಸಾಧ್ಯತೆಯಿದ್ದು
ಆದರೆ ಸಿಬ್ಬಂದಿ ಕೊರತೆ ಕೂಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ಎಲ್ಲ ಕಾರಣಗಳಿಂದಾಗಿ ನಿಗದಿತ ದಿನಾಂಕಕ್ಕೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.













