32.8 C
Udupi
Monday, October 12, 2026
spot_img
spot_img
HomeBlogಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್‌ನ್ಯೂಸ್‌: ದಾಖಲೆ ಪರಿಶೀಲನೆಗೆ ಅ.31ರವರೆಗೆ ಗಡುವು ವಿಸ್ತರಣೆ

ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್‌ನ್ಯೂಸ್‌: ದಾಖಲೆ ಪರಿಶೀಲನೆಗೆ ಅ.31ರವರೆಗೆ ಗಡುವು ವಿಸ್ತರಣೆ

ಬೆಂಗಳೂರು: ರಾಜ್ಯ ಸರ್ಕಾರದ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಯ ಫಲಾನುಭವಿಗಳ ದಾಖಲೆಗಳ ಮರುಪರಿಶೀಲನೆಗೆ ಮತ್ತೊಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಮನೆ ಮಾಲೀಕರು ಮತ್ತು ಬಾಡಿಗೆದಾರರ ಪರಿಶೀಲನೆ ಪೂರ್ಣಗೊಳಿಸಲು ಸರ್ಕಾರವು ಕೊನೆಯ ದಿನಾಂಕವನ್ನು ಅಕ್ಟೋಬರ್ 31, 2026ರವರೆಗೆ ವಿಸ್ತರಿಸಿದೆ.

ಜುಲೈ 1ರಿಂದ ಆರಂಭವಾದ ಮನೆ-ಮನೆ ಸಮೀಕ್ಷೆಯನ್ನು ಸೆಪ್ಟೆಂಬರ್ 30ರೊಳಗೆ ಪೂರ್ಣಗೊಳಿಸಲು ಗುರಿ ನಿಗದಿಪಡಿಸಲಾಗಿತ್ತು. ಸುಮಾರು ಶೇ.98ರಷ್ಟು ಪರಿಶೀಲನೆ ಮುಗಿದಿದ್ದರೂ, ಕೆಲವು ಮನೆಗಳ ದಾಖಲೆ ಪರಿಶೀಲನೆ ಬಾಕಿ ಉಳಿದಿತ್ತು. ಮನೆಗಳಿಗೆ ಬೀಗ ಹಾಕಿರುವುದು, ಫಲಾನುಭವಿಗಳು ಲಭ್ಯವಿಲ್ಲದಿರುವುದು, ಮಾಹಿತಿ ನೀಡಲು ನಿರಾಕರಿಸುವುದು ಹಾಗೂ ಖಾಲಿ ಮನೆಗಳ ಪರಿಶೀಲನೆ ಪೂರ್ಣಗೊಳಿಸಲು ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆ.

ವಿದ್ಯುತ್ ಕಂಪನಿಗಳ ಮೀಟರ್ ರೀಡರ್‌ಗಳು ಮತ್ತು ಸಿಬ್ಬಂದಿ ಮನೆಗಳಿಗೆ ಭೇಟಿ ನೀಡಿ ಫಲಾನುಭವಿಗಳ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಇತ್ತೀಚಿನ ಭಾವಚಿತ್ರ, ವರ್ಗ, ಆದಾಯ ತೆರಿಗೆ ಪಾವತಿ ಮತ್ತು ವೃತ್ತಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಮನೆಗಳ ಜಕಾತಿ ಬದಲಾವಣೆ ಹಾಗೂ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ವ್ಯವಸ್ಥೆ ಹೊಂದಿರುವ ಮನೆಗಳ ವಿವರಗಳನ್ನೂ ಸೇವಾಸಿಂಧು ಪೋರ್ಟಲ್‌ನಲ್ಲಿ ನವೀಕರಿಸಲಾಗುತ್ತಿದೆ.

ಮನೆಗೆ ಭೇಟಿ ನೀಡುವ ಸಿಬ್ಬಂದಿಗೆ ಅಗತ್ಯ ದಾಖಲೆಗಳು ಮತ್ತು ಸರಿಯಾದ ಮಾಹಿತಿಯನ್ನು ಒದಗಿಸಿ ಸಹಕರಿಸಬೇಕು. ನೋಂದಾಯಿತ ಫಲಾನುಭವಿ ಮನೆಯಲ್ಲಿ ಇಲ್ಲದಿದ್ದರೆ, ಕುಟುಂಬದ ಹಿರಿಯ ಸದಸ್ಯರು ಘೋಷಣಾ ಪತ್ರಕ್ಕೆ ಸಹಿ ಮಾಡಬಹುದು.

ಮನೆಗೆ ಬೀಗ ಹಾಕಿದ್ದರೆ ಸಿಬ್ಬಂದಿ ವಿವಿಧ ಸಮಯಗಳಲ್ಲಿ ಒಟ್ಟು ಮೂರು ಬಾರಿ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಜಿಪಿಎಸ್ ಸ್ಥಳವನ್ನು ದಾಖಲಿಸಿ, ಮೀಟರ್ ರೀಡರ್‌ನ ಹೆಸರು ಮತ್ತು ದೂರವಾಣಿ ಸಂಖ್ಯೆಯಿರುವ ಎಸ್‌ಎಂಎಸ್‌ ಅನ್ನು ಫಲಾನುಭವಿಯ ಮೊಬೈಲ್‌ಗೆ ಕಳುಹಿಸಲಾಗುತ್ತದೆ. ಫಲಾನುಭವಿಗಳು ಸಂದೇಶದಲ್ಲಿರುವ ಮಾಹಿತಿಯ ಆಧಾರದಲ್ಲಿ ಸಿಬ್ಬಂದಿಯನ್ನು ಸಂಪರ್ಕಿಸಿ ದಾಖಲೆ ಪರಿಶೀಲನೆ ಪೂರ್ಣಗೊಳಿಸಬೇಕು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page