
ಬೆಂಗಳೂರು: ಕೆಲವು ದಿನಗಳಿಂದ ರಾಜ್ಯದಲ್ಲಿ ಗಾಳಿಯ ಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದಿದ್ದರೂ, ಇಂದು ಮಂಗಳೂರಿನಲ್ಲಿ ಏಕಾಏಕಿ ಏರ್ ಕ್ವಾಲಿಟಿ ಹದಗೆಟ್ಟಿದೆ. ಇದರಿಂದ ಅದು ಆತಂಕಕಾರಿ ಮಟ್ಟಕ್ಕೆ ತಲುಪಿದ್ದು, ಉಡುಪಿಯಲ್ಲಿಯೂ ಗಾಳಿಯ ಗುಣಮಟ್ಟ ಉಸಿರಾಟಕ್ಕೆ ಅನುಕೂಲಕರವಾಗಿಲ್ಲ ಎಂದು ವರದಿಯಾಗಿದೆ.
ಇನ್ನೊಂದೆಡೆ, ಬೆಂಗಳೂರಿನಲ್ಲಿ AQI ತಾತ್ಕಾಲಿಕವಾಗಿ ಉತ್ತಮ ಮಟ್ಟದಲ್ಲಿದ್ದರೂ, ತಜ್ಞರ ಪ್ರಕಾರ ಅದು ಇನ್ನೂ ಸಂಪೂರ್ಣವಾಗಿ ಆರೋಗ್ಯಕರ ಸ್ಥಿತಿಗೆ ಬಂದಿಲ್ಲ. ಇದೇ ವೇಳೆ, ಹುಬ್ಬಳ್ಳಿ ಮತ್ತು ಬೆಳಗಾವಿ ಸೇರಿದಂತೆ ಕೆಲವು ನಗರಗಳಲ್ಲಿ ವಾಯು ಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದಿದೆ. ಕೆಲವು ದಿನಗಳ ಹಿಂದೆ ತುಂಬಾ ಕಳಪೆ ಮಟ್ಟದಲ್ಲಿದ್ದ ಬೆಂಗಳೂರಿನ AQI ಈಗ 110ಕ್ಕೆ ಏರಿಕೆಯಾಗಿದೆ. ಮಂಗಳೂರು ಹಾಗೂ ಉಡುಪಿಯಲ್ಲಿ AQI 150ಕ್ಕಿಂತ ಮೇಲಿರುವುದರಿಂದ, ಅಲ್ಲಿ ಗಾಳಿಯ ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿದೆ.
ಸಂಖ್ಯೆಯಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆ ಕಂಡರೂ, WHO ಮಾರ್ಗಸೂಚಿಗಳ ಪ್ರಕಾರ ಈ ಮಟ್ಟದ ಗಾಳಿ ಇನ್ನೂ ಆರೋಗ್ಯಕ್ಕೆ ಅಪಾಯಕಾರಿಯೇ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಇಂದು ರಾಜ್ಯದ ವಿವಿಧ ನಗರಗಳ ಗಾಳಿಯ ಗುಣಮಟ್ಟ ಸೂಚ್ಯಂಕ (AQI) ಹೀಗಿದೆ:
ಬೆಂಗಳೂರು – 110
ಮಂಗಳೂರು – 156
ಮೈಸೂರು – 134
ಬೆಳಗಾವಿ – 136
ಕಲಬುರ್ಗಿ – 136
ಶಿವಮೊಗ್ಗ – 116
ಬಳ್ಳಾರಿ – 151
ಹುಬ್ಬಳ್ಳಿ – 100
ಉಡುಪಿ – 125
ವಿಜಯಪುರ – 109
ಗಾಳಿಯ ಗುಣಮಟ್ಟದ ವರ್ಗೀಕರಣ ಹೀಗಿದೆ:
ಉತ್ತಮ – 0 ರಿಂದ 50
ಮಧ್ಯಮ – 50 ರಿಂದ 100
ಕಳಪೆ – 100 ರಿಂದ 150
ಅನಾರೋಗ್ಯಕರ – 150 ರಿಂದ 200
ಗಂಭೀರ – 200 ರಿಂದ 300
ಅಪಾಯಕಾರಿ – 300 ರಿಂದ 500













