ನಾಟಕ ವೀಕ್ಷಿಸಲು ಹೆರ್ಗ ಫ್ರೆಂಡ್ಸ್ ವತಿಯಿಂದ, “ನಿಮಗಿದೆಯೊಂದು ಸುವರ್ಣವಕಾಶ”
ಅ. 25ರಂದು, ಯಕ್ಷಗಾನ ಕಲಾ ರಂಗ ಉಡುಪಿ – 3ಕ್ಕೆ ಮೊದಲ ಪ್ರದರ್ಶನ,ಸಂಜೆ 6.30ಕ್ಕೆ ಎರಡನೇ ಪ್ರದರ್ಶನ

ಉಡುಪಿ: ಹೆರ್ಗ ಫ್ರೆಂಡ್ಸ್ ಹೆರ್ಗ ಅರ್ಪಿಸುವ ಚೈತನ್ಯ ಕಲಾವಿದರು ಬೈಲೂರು ಇವರಿಂದ ಅಕ್ಟೋಬರ್ 25 ಭಾನುವಾರ ಯಕ್ಷಗಾನ ಕಲಾರಂಗ (IYC) ಕುಂಜಿ ಬೆಟ್ಟುವಿನಲ್ಲಿ ‘ಊರು ಬೋರ್ಡು ಪುದರ್ ಬೊಡ್ಚಿ’ ಎಂಬ ಹಾಸ್ಯಮಯ ನಾಟಕ ನಡೆಯಲಿದೆ.
ಪ್ರಸನ್ನ ಶೆಟ್ಟಿ ಬೆಲೂರು ಅವರ ಸಾರಥ್ಯ, ಕಥೆ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದ ಈ ನಾಟಕದ ಮೊದಲ ಪ್ರದರ್ಶನ ಮಧ್ಯಾಹ್ನ 3:00 ಗಂಟೆಗೆ ಹಾಗೂ ಎರಡನೇ ಪ್ರದರ್ಶನ ಸಂಜೆ 06:30ಕ್ಕೆ ನಡೆಯಲಿದೆ. ಮೊದಲ ಪ್ರದರ್ಶನದ ಎಲ್ಲಾ ಸೀಟ್ಗಳು ಈಗಾಗಲೇ ಬುಕ್ ಆಗಿದ್ದು 2ನೇ ಪ್ರದರ್ಶನಕ್ಕೆ ಬುಕಿಂಗ್ ಮಾಡಬಹುದು.
ವಿಶೇಷತೆಯೇನೆಂದರೆ ಎರಡನೇ ಪ್ರದರ್ಶನದಲ್ಲಿ 15 ಫ್ಯಾಮಿಲಿ ಗೆ ( ತಂದೆ, ತಾಯಿ, ಮಗ/ಮಗಳು) ತಂಡದ ವತಿಯಿಂದ ಉಚಿತ ಪಾಸ್ ನೀಡಲಾಗುತ್ತದೆ. ಬುಕ್ಕಿಂಗಾಗಿ ಕಿರಣ್ ಗರಡಿ ಮಜಲು 9964600857 ಸಂಪರ್ಕಿಸಬಹುದಾಗಿದೆ.






















