26.3 C
Udupi
Thursday, October 22, 2026
spot_img
spot_img
HomeBlogನ. 1ರಿಂದ ಆಸ್ಪತ್ರೆ ಬಿಲ್‌ನಲ್ಲಿ ಔಷಧದ ಖರೀದಿ ಬೆಲೆ ನಮೂದಿಸುವುದು ಕಡ್ಡಾಯ..!

ನ. 1ರಿಂದ ಆಸ್ಪತ್ರೆ ಬಿಲ್‌ನಲ್ಲಿ ಔಷಧದ ಖರೀದಿ ಬೆಲೆ ನಮೂದಿಸುವುದು ಕಡ್ಡಾಯ..!

ಆಸ್ಪತ್ರೆಗಳ ಬಿಲ್‌ನಲ್ಲಿ ಪಾರದರ್ಶಕತೆ ತರಲು ಸರ್ಕಾರದ ಮಹತ್ವದ ನಿರ್ಧಾರ

ಬೆಂಗಳೂರು: ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಾಗ ವೈದ್ಯಕೀಯ ವೆಚ್ಚದ ಜೊತೆಗೆ ಔಷಧಗಳು ಮತ್ತು ಉಪಕರಣಗಳಿಗೆ ಎಷ್ಟು ಹಣ ಪಾವತಿಸುತ್ತಿದ್ದೇವೆ ಎಂಬುದು ರೋಗಿಗಳಿಗೆ ಸ್ಪಷ್ಟವಾಗಿ ತಿಳಿಯುವುದಿಲ್ಲ. ಈ ಸಮಸ್ಯೆಗೆ ಪರಿಹಾರ ಕಲ್ಪಿಸಲು ಆರೋಗ್ಯ ಇಲಾಖೆ ಮಹತ್ವದ ಕ್ರಮ ಕೈಗೊಂಡಿದ್ದು, ನವೆಂಬರ್ 1ರಿಂದ ಕರ್ನಾಟಕದ ಆಸ್ಪತ್ರೆಗಳಲ್ಲಿ ಬಿಲ್ಲಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಡ್ಡಾಯವಾಗಲಿದೆ.

ಆಸ್ಪತ್ರೆ ಬಿಲ್‌ನಲ್ಲೇ ಔಷಧದ ಖರೀದಿ ಬೆಲೆ: ನ. 1ರಿಂದ ಜಾರಿ

ಆಸ್ಪತ್ರೆಗಳಲ್ಲಿ ಲಭ್ಯವಿರುವ ಚಿಕಿತ್ಸೆ ಹಾಗೂ ಅವುಗಳ ನಿಗದಿತ ದರಗಳನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸುವುದು ಕಡ್ಡಾಯವಾಗಲಿದೆ. ಆಸ್ಪತ್ರೆಗಳ ನೋಂದಣಿ ಕೌಂಟರ್ ಬಳಿ ದರಪಟ್ಟಿ ಅಳವಡಿಸುವ ಮೂಲಕ ರೋಗಿಗಳಿಗೆ ಚಿಕಿತ್ಸೆಯ ವೆಚ್ಚದ ಬಗ್ಗೆ ಮುಂಚಿತವಾಗಿ ಮಾಹಿತಿ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ.

ಔಷಧಗಳ ಖರೀದಿ ಬೆಲೆ, ಎಂಆರ್‌ಪಿ ನಮೂದಿಸುವುದು ಕಡ್ಡಾಯ:

ಔಷಧಗಳ ಬಿಲ್ಲಿಂಗ್‌ನಲ್ಲೂ ಹೊಸ ನಿಯಮ ಜಾರಿಯಾಗಲಿದ್ದು, ಆಸ್ಪತ್ರೆಗಳು ಔಷಧಗಳನ್ನು ಖರೀದಿಸಿದ ಬೆಲೆ ಮತ್ತು ರೋಗಿಗಳಿಗೆ ವಿಧಿಸುವ ಬೆಲೆಯನ್ನು ಬಿಲ್‌ನಲ್ಲಿ ನಮೂದಿಸಬೇಕು. ಔಷಧದ ಹೆಸರು, ಬ್ರ್ಯಾಂಡ್, ಬ್ಯಾಚ್ ಸಂಖ್ಯೆ, ತಯಾರಿಕಾ ದಿನಾಂಕ ಹಾಗೂ ಮುಕ್ತಾಯ ದಿನಾಂಕದ ವಿವರಗಳನ್ನೂ ಪ್ರತ್ಯೇಕವಾಗಿ ದಾಖಲಿಸಬೇಕಾಗುತ್ತದೆ.

ಔಷಧಗಳ ಜೊತೆಗೆ ವೈದ್ಯಕೀಯ ಉಪಕರಣಗಳು, ಸ್ಟೆಂಟ್‌ಗಳು ಮತ್ತು ಬಳಸಿ ಬಿಸಾಡುವ ವೈದ್ಯಕೀಯ ಸಾಮಗ್ರಿಗಳ ಬಿಲ್ಲಿಂಗ್‌ನಲ್ಲೂ ಪಾರದರ್ಶಕತೆ ಕಾಪಾಡುವಂತೆ ಸೂಚಿಸಲಾಗಿದೆ. ಇದರಿಂದ ರೋಗಿಗಳು ವಿಧಿಸಿರುವ ದರವನ್ನು ಪರಿಶೀಲಿಸಲು ಸಾಧ್ಯವಾಗಲಿದೆ.

ಮೂರು ವರ್ಷ ದಾಖಲೆ ಸಂರಕ್ಷಣೆ ಕಡ್ಡಾಯ:

ಔಷಧಗಳ ಖರೀದಿ ಇನ್‌ವಾಯ್ಸ್, ಖರೀದಿ ದರ ಹಾಗೂ ಬಿಲ್ಲಿಂಗ್ ದಾಖಲೆಗಳನ್ನು ಕನಿಷ್ಠ ಮೂರು ವರ್ಷಗಳ ಕಾಲ ಆಸ್ಪತ್ರೆಗಳು ಸಂರಕ್ಷಿಸಬೇಕು. ಅಗತ್ಯವಿದ್ದಾಗ ಔಷಧ ನಿಯಂತ್ರಣ ಪ್ರಾಧಿಕಾರದ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಬಹುದು. ನಿಯಮ ಉಲ್ಲಂಘಿಸುವ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಜಿಲ್ಲಾ ಆರೋಗ್ಯಾಧಿಕಾರಿಗಳು, ಮುಖ್ಯ ವೈದ್ಯಾಧಿಕಾರಿಗಳು ಮತ್ತು ಔಷಧ ನಿಯಂತ್ರಣ ಪ್ರಾಧಿಕಾರದ ಅಧಿಕಾರಿಗಳು ನಿಯಮಗಳ ಪಾಲನೆ ಮೇಲ್ವಿಚಾರಣೆ ಮಾಡಲಿದ್ದಾರೆ. ಈ ಸೂಚನೆಗಳು ಕರ್ನಾಟಕದ ಸರ್ಕಾರಿ, ಖಾಸಗಿ ಹಾಗೂ ಟ್ರಸ್ಟ್ ಆಸ್ಪತ್ರೆಗಳಿಗೆ ಅನ್ವಯಿಸಲಿವೆ.

ಒಟ್ಟಿನಲ್ಲಿ, ಆಸ್ಪತ್ರೆಗಳ ಚಿಕಿತ್ಸಾ ದರ ಮತ್ತು ಔಷಧಗಳ ಬೆಲೆ ಕುರಿತು ರೋಗಿಗಳಿಗೆ ಸ್ಪಷ್ಟ ಮಾಹಿತಿ ಒದಗಿಸುವುದು ಈ ಕ್ರಮದ ಉದ್ದೇಶವಾಗಿದೆ. ಆದರೆ ನಿಯಮಗಳಿಗೆ ಖಾಸಗಿ ಆಸ್ಪತ್ರೆಗಳಿಂದ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಸರ್ಕಾರ ಮುಂದಿನ ದಿನಗಳಲ್ಲಿ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page