25.5 C
Udupi
Wednesday, July 1, 2026
spot_img
spot_img
HomeBlogಬ್ರಹ್ಮಾವರ ರಸ್ತೆ ದುರಂತ: ಹುಲಿ ವೇಷ ಕಲಾವಿದ ಸ್ಥಳದಲ್ಲೇ ಸಾವು

ಬ್ರಹ್ಮಾವರ ರಸ್ತೆ ದುರಂತ: ಹುಲಿ ವೇಷ ಕಲಾವಿದ ಸ್ಥಳದಲ್ಲೇ ಸಾವು

ಉಡುಪಿ: ಬ್ರಹ್ಮಾವರದ ಹೇರೂರು ರೂಡ್‌ಸೆಟ್ ಕ್ರಾಸಿಂಗ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹುಲಿ ವೇಷದ ಖ್ಯಾತ ಕಲಾವಿದರೊಬ್ಬರು ಮೃತಪಟ್ಟಿದ್ದಾರೆ.

ಮೃತರನ್ನು ಉಡುಪಿಯ ಸಂತೆಕಟ್ಟೆ ಲಕ್ಷ್ಮೀನಗರದ ನಿವಾಸಿ ಮಂಜುನಾಥ್ (43) ಎಂದು ಗುರುತಿಸಲಾಗಿದೆ. ಮಾಹಿತಿಯ ಪ್ರಕಾರ, ಗೋವಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಐವರು ಇನ್ನೋವಾ ಕಾರಿನಲ್ಲಿ ಉಡುಪಿಗೆ ಮರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಮುಂದೆ ಸಾಗುತ್ತಿದ್ದ ವೇಗದೂತ ಬಸ್ ಹಠಾತ್ ಬ್ರೇಕ್ ಹಾಕಿದ ಪರಿಣಾಮ, ಹಿಂಬದಿಯ ಕಾರು ನಿಯಂತ್ರಣ ಕಳೆದುಕೊಂಡು ಬಸ್ಸಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ತೀವ್ರತೆಗೆ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದು, ಕಾರಿನಲ್ಲಿದ್ದ ಉಳಿದ ನಾಲ್ವರು ಗಾಯಗಳೊಂದಿಗೆ ಪಾರಾಗಿದ್ದಾರೆ.

ಮಂಜುನಾಥ್ ಕರಾವಳಿ ಭಾಗದಲ್ಲಿ ಹುಲಿ ವೇಷ ಕಲೆಗೆ ಸೇವೆ ಸಲ್ಲಿಸಿದ್ದ ಕಲಾವಿದರಾಗಿದ್ದು, ಹುಲಿ ವೇಷಧಾರಿಗಳಿಗೆ ವಿಶಿಷ್ಟ ಪೈಂಟಿಂಗ್ ಮೂಲಕ ಪರಿಚಿತರಾಗಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page