
ಮಾಳ: ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿ ಜೂನ್ 16, 2026 ರಂದು ಜಾಲಿ ಬಾಯ್ಸ್ ಬಜೆಗೋಳಿ ಹಾಗೂ ವಿವಿಧ ದಾನಿಗಳಿಂದ ಸಮವಸ್ತ್ರ ಮತ್ತು ಶೈಕ್ಷಣಿಕ ಪರಿಕರಗಳ ವಿತರಣಾ ಕಾರ್ಯಕ್ರಮ ನೂತನವಾಗಿ ಆರಂಭವಾಗಲಿರುವ ಎಐ ತರಗತಿಗಳ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಲಾಯಿತು.
ವೇದಿಕೆಯಲ್ಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಗಜಾನನ ಮರಾಠೆ ಇವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿರುವ ಗುರುರಾಜ ಮ್ಯಾನೇಜಿಂಗ್ ಡೈರೆಕ್ಟರ್ ಅಂಡ್ ಫೌಂಡರ್ ಆಫ್ ಜನರೇಶನ್ ನೆಕ್ಸ್ಟ್, ಸಂಜನಾ ಮರಾಠೆ ಹಾಗೂ ಉಚಿತ ನೋಟ್ ಪುಸ್ತಕಗಳ ಪ್ರಾಯೋಜಕರಾದ ಜಾಲಿ ಬಾಯ್ಸ್ ಬಜೆಗೋಳಿ ಇದರ ಮುಖ್ಯಸ್ಥರಾಗಿರುವ ರಜತ್ ರಾಮ್ ಮೋಹನ್, ಪ್ರಶಾಂತ್ ಕೋಟ್ಯಾನ್, ಪ್ರಶಾಂತ್ ಕೋಟ್ಯಾನ್ ಮತ್ತು ಸುರೇಶ್ ಕುಮಾರ್ ಎ ಐ ತರಬೇತುದಾರರು, ಗುಣ ಶಿಲ್ಪ ಎ ಐ ತರಬೇತಿದಾರರು, ವಿ.ಎಮ್ ಮೈಕಲ್,ಶಾಲಾ ಸಂಚಾಲಕರಾದ ಸುಧಾಕರ ಡೊಂಗ್ರೆ, ಹಾಗೂ ಶಾಲಾ ಮುಖ್ಯೋಪಾಧ್ಯಯರಾದ ಪೂರ್ಣಿಮಾ ಶೆಣೈ ಇವರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದರು.ಹಲವಾರು ವರ್ಷದಿಂದ ಜಾಲಿ ಬಾಯ್ಸ್ ಬಜೆಗೋಳಿ ತಂಡದವರು ಉಚಿತ ನೋಟ್ ಪುಸ್ತಕವನ್ನು ಬಜಗೋಳಿಯ ಪರಿಸರದ ಆಯ್ದ ಶಾಲೆಗಳಿಗೆ ಕೊಡುತ್ತಾ ಬಂದಿದ್ದು ಮಾಳ ಗುರುಕುಲ ಅನುದಾನಿತ ಶಾಲೆಗೆ ಸತತ ಎರಡನೇ ವರ್ಷವು ಕೂಡ ಸುಮಾರು 80 ಸಾವಿರಕ್ಕೂ ಅಧಿಕ ಮೌಲ್ಯದ ನೋಟ್ ಪುಸ್ತಕಗಳನ್ನು ಹಾಗೂ ಲೇಖನಿ ಸಾಮಾಗ್ರಿಗಳನ್ನು ನೀಡಿರುತ್ತಾರೆ.


































