31.5 C
Udupi
Friday, April 24, 2026
spot_img
spot_img
HomeBlogಕಲಿಯಬೇಕಾದುದನ್ನು ವಿಭಿನ್ನವಾಗಿ ಸ್ಪರ್ಧಾತ್ಮಕ ಚಟುವಟಿಕೆಗಳ ಮೂಲಕ ತೆರೆದಿಟ್ಟರೆ, ಮಕ್ಕಳಿಗೆ ಕಲಿಕೆಯೇ ಒಂದು ಹಬ್ಬವಾಗುತ್ತದೆ: ಶ್ರೀಮತಿ ಗಿರಿಜಮ್ಮ

ಕಲಿಯಬೇಕಾದುದನ್ನು ವಿಭಿನ್ನವಾಗಿ ಸ್ಪರ್ಧಾತ್ಮಕ ಚಟುವಟಿಕೆಗಳ ಮೂಲಕ ತೆರೆದಿಟ್ಟರೆ, ಮಕ್ಕಳಿಗೆ ಕಲಿಕೆಯೇ ಒಂದು ಹಬ್ಬವಾಗುತ್ತದೆ: ಶ್ರೀಮತಿ ಗಿರಿಜಮ್ಮ

ಎಫ್ ಎಲ್ ಎನ್ ಕಲಿಕಾ ಹಬ್ಬವು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿದ್ದು ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕಲಿಯಬೇಕಾದುದ್ದನ್ನು ವಿಭಿನ್ನವಾಗಿ ಸ್ಪರ್ಧಾತ್ಮಕ ಚಟುವಟಿಕೆಗಳ ಮೂಲಕ ತೆರೆದಿಟ್ಟರೆ, ಮಕ್ಕಳಿಗೆ ಕಲಿಕೆಯೇ ಒಂದು ಹಬ್ಬವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಗಿರಿಜಮ್ಮ ಹೇಳಿದರು.


ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಳ ಮೈನ್ ಕಾರ್ಕಳ ಇಲ್ಲಿ ಆಯೋಜಿಸಿದ ಸಾಣೂರು ಕ್ಲಸ್ಟರ್ ಮಟ್ಟದ ಎಫ್ಎಲ್ ಎನ್ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.
ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ್ ರಾಣೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಪುರಸಭೆಯ ವಾರ್ಡ್ ಮೆಂಬರ್ ಸುಮಾ ಕೇಶವ್, ಬಿ ಆರ್ ಸಿ ಕೋಆರ್ಡಿನೇಟರ್ ಸಂತೋಷ್ ಕುಮಾರ್ ಶೆಟ್ಟಿ, ಇಸಿಓ ಬಾಲಕೃಷ್ಣ ನಾಯಕ್, ಸಿ ಆರ್ ಪಿಗಳಾದ ಜ್ಯೋತಿ, ಪ್ರೇಮ, ಮಮತಾ, ಸರಕಾರಿ ನೌಕರರ ಸಂಘ ಕಾರ್ಕಳ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಸಹಶಿಕ್ಷಕಿ ಗೀತಾ ಕೆ, ಸಮಗ್ರ ಶಿಕ್ಷಣ ಉಡುಪಿ ಇಲ್ಲಿನ ಡಿ.ವೈ.ಪಿ.ಸಿ ಶಾರದಮ್ಮ, ಎ.ಪಿ.ಸಿ ಜ್ಯೋತಿ ಮೊದಲಾದವರು ಉಪಸ್ಥಿತರಿದ್ದರು.
ಕಲಿಕಾ ಹಬ್ಬದ ಸಂಪನ್ಮೂಲ ವ್ಯಕ್ತಿಗಳಾದ ಪ್ರತಿಮಾ ಎಸ್, ರೇವತಿ, ಸುಧಾರಾಣಿ, ಶಕೀಲಾ, ಕಲಾವತಿ, ಶ್ವೇತಾ , ಗೀತಾ ಕೆ ಹಾಗೂ ತೀರ್ಪುಗಾರರಾಗಿ ಕಾಬೆಟ್ಟು ಕ್ಲಸ್ಟರ್ ನ ಸಹಶಿಕ್ಷಕಿಯರು ಭಾಗವಹಿಸಿದ್ದರು.
ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ಮಾಲಶ್ರೀ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಶಶಿಕಲಾ ಸ್ವಾಗತಿಸಿದರು. ಸಹ ಶಿಕ್ಷಕ ಶಿವಾನಂದ ನಿರೂಪಿಸಿದರು. ಪದವೀಧರ ಸಹಶಿಕ್ಷಕಿ ಪ್ರತಿಮಾ ಎಸ್ ವಂದಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page