25.2 C
Udupi
Friday, April 24, 2026
spot_img
spot_img
HomeBlogಕಲಿಕೆಯ ಮೌಲ್ಯಮಾಪನಕ್ಕೆ ಪರೀಕ್ಷೆಯೇ ಮಾನದಂಡ: ಜೇಸಿ ಚಿತ್ತರಂಜನ್ ಶೆಟ್ಟಿ

ಕಲಿಕೆಯ ಮೌಲ್ಯಮಾಪನಕ್ಕೆ ಪರೀಕ್ಷೆಯೇ ಮಾನದಂಡ: ಜೇಸಿ ಚಿತ್ತರಂಜನ್ ಶೆಟ್ಟಿ

ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆಯು ಕಲಿಕೆಯ ಗುಣಮಟ್ಟವನ್ನು ತಿಳಿಸುತ್ತದೆ. ಹಾಗೆಯೇ ಕಲಿತ ವಿಷಯಗಳ ಮೌಲ್ಯಮಾಪನಕ್ಕೆ ಪರೀಕ್ಷೆ ಬಹು ಮುಖ್ಯವಾದುದಾಗಿದೆ. ಇದು ಕೇವಲ ಅರ್ಹತೆಯನ್ನು ತಿಳಿಸುವುದಲ್ಲ ಪುನಃ ನಮ್ಮ ಕಲಿಕೆಯನ್ನು ಸರಿಪಡಿಸಿ ಹೊಸ ಜ್ಞಾನಕ್ಕೆ ಪ್ರೋತ್ಸಾಹ ನಿಡುವುದು. ಹಾಗಾಗಿ ಪರೀಕ್ಷೆ ಬರೆದು ತಮ್ಮ ಕಲಿಕಾ ಸಾಮಥ್ರ್ವನ್ನು ಸ್ಪಷ್ಟ ಪಡಿಸಿಕೊಳ್ಳಬಹುದು ಪರೀಕ್ಷೆ. ಎಂದಾಗ.ಅಂಜಿಕೆ.ಅಳುಕು ಭಯ ನಕಾರಾತ್ಮಕ ಚಿಂತನೆ ಬೇಡ ಅಂತೆಯೇ ಕಾರ್ಕಳ ಸ್ಕೌಟ್ಸ್ ಗೈಡ್ಸ್. ಕಬ್ ಬುಲ್ ಬುರ್ ಮಕ್ಕಳು ಸಮಾಜ ಸೇವೆಯ ಜೊತೆಗೆ ಜೀವನ ಶಿಕ್ಷಣವನ್ನು ಈ ಸ್ಕೌಟ್ಸ್. ಗೈಡ್ಸ್. ಚಳುವಳಿಯ ಮೂಲಕ ತಿಳಿಯುತ್ತಿದ್ದಾರೆ. ಪ್ರಾರ್ಥನೆ ‌ಸ್ಕೌಟ ನಿಯಮಗಳು ಪ್ರತಿಜ್ಞೆ ಧ್ಯೇಯ ಪ್ರಥಮ ಚಿಕಿತ್ಸೆ ರೋಪ್ ಗಂಟುಗಳು ಆಕಾಶ ನಕ್ಷತ್ರ ವೀಕ್ಷಣೆ ದಿಕ್ಸೂಚಿ ಮೂಲಕ ದಿಕ್ಕುಗಳು ಅಂದಾಜಿಸುವಿಕೆ ಸಮವಸ್ತ್ರದ ಮಹತ್ವ ಹೀಗೆಯೇ ಬೇರೆ.ಬೇರೆ ಮೌಲಿಕ ವಿಷಯಗಳ ಬಗ್ಗೆ ತಿಳಿದು ಪರೀಕ್ಷೆ. ಬರೆದು ಪ್ರತೀ ಹಂತದ ಪುರಸ್ಕಾರ ಪಡೆಯಲು ಅರ್ಹರಾಗುತ್ತಿದ್ದಾರೆ.ಇದು ಸ್ಕೌಟ್ಸ್. ಗೈಡ್ಸ್ ಪಠ್ಯ ವಿಷಯಗಳ ಮೂಲಕ ಸಾಧ್ಯವಾಗುತ್ತಿದೆ. ಇಂತಹ ಸಾಧನೆಯಲ್ಲಿ ಕಾರ್ಕಳ. ಸ್ಕೌಟ್ಸ್. ಗೈಡ್ಸ್ ಮುಂಚೂಣಿಯಲ್ಲಿ ಇದೆ ಎಂದು ಕಾರ್ಕಳ ಜೇಸಿಸ್ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಜೇಸೀ ಚಿತ್ತರಂಜನ್ ಶೆಟ್ಟಿ ‌ಹೇಳಿದರು.

ಅವರು ಕಾರ್ಕಳದ ಜೇಸಿಸ್ ಆಂಗ್ಲ. ಮಾಧ್ಯಮ ಶಾಲೆಯಲ್ಲಿ ಕಾರ್ಕಳ ಸ್ಥಳೀಯ ಸಂಸ್ಥೆಯ ವತಿಯಿಂದ ನಡೆದ ಒಂದು ದಿನದ ದ್ವಿತೀಯ ಸೋಪಾನ ಪರೀಕ್ಷೆಯ ಕ್ಯಾಂಪಿಗೆ. ಆಗಮಿಸಿ ದೀಪ ಬೆಳಗಿಸಿ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ಪು ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಶ್ರೀ ಜಗದೀಶ್ ಹೆಗ್ಡೆ ವಹಿ‌ಸಿದರು. ವೇದಿಕೆಯಲ್ಲಿ ಉಡುಪಿ ಜಿಲ್ಲಾ ಕಾರ್ಯದರ್ಶಿ ಶ್ರೀ ಆನಂದ ಅಡಿಗ ಉಪಾಧ್ಯಕ್ಷೆ ಶ್ರೀಮತಿ ಸಾವಿತ್ರಿ ಮನೋಹರ್ ಕೋಶಾಧಿಕಾರಿ ಶ್ರೀ ಸತೀಶ್ ಶೆಟ್ಟಿ ಸಹಾಯಕ ಜಿಲ್ಲಾ ಆಯುಕ್ತೆ ಶ್ರೀಮತಿ ವೃಂದಾ ಹರಿಪ್ರಕಾಶ್ ಶೆಟ್ಟಿ ಶಾಲಾ ಮುಖ್ಯ ಶಿಕ್ಷಕಿ ಸುರೇಖಾ ರಾಜ್ ಶಿಬಿರ ನಾಯಕಿ ಶಿಕ್ಷಕಿ ಶಮ್ಯಾ ಶಿಬಿರ ಸಂಪನ್ಮೂಲ ಶಿಕ್ಷಕ ಮೂಡಬಿದ್ರೆ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಶಿಕ್ಷಕ ನವೀನ್ ಕುಮಾರ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಅತಿಥಿಗಳು.ಪುಷ್ಪ ಸಮರ್ಪಣೆ ಮಾಡಿ ಶಿವಾಜಿ ಜಯಂತಿಯನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಸ್ಥಳೀಯ. ಸಂಸ್ಥೆಯ ಕಾರ್ಯದರ್ಶಿ ಗಣೇಶ್ ಜಾಲ್ಸೂರು ನಿರೂಪಿಸಿ ಜೊತೆ ಕಾರ್ಯದರ್ಶಿ ಗೈಡ್ ಶಿಕ್ಷಕಿ ಸೀಮಾ ಕಾಮತ್ ಸ್ವಾಗತಿಸಿದರು. ಜೇಸಿಸ್ ಶಾಲಾ ಸ್ಕೌಟ್ ಶಿಕ್ಷಕಿ ಪವಿತ್ರಾ ವಂದಿಸಿದರು.ಈ ಶಿಬಿರದಲ್ಲಿ ತಾಲೂಕಿನ ಕಬ್ ಬುಲ್ ಬುಲ್ ಸ್ಕೌಟ್ಸ್ ಗೈಡ್ಸ್ ಶಿಕ್ಷಕರು ಸಃಪನ್ಮೂಲ ಶಿಕ್ಷಕರಾಗಿ ಸಹಕರಿಸಿದರು. ಹಿರಿಯ. ಸ್ಕೌಟ್ ಶಿಕ್ಷಕ ಎಸ್.ಎನ್.ವಿ ಶಾಲಾ ಶಿಕ್ಷಕ ನವೀನ್ ಕುಮಾರ್ ಹಾಗೂ ಜೇಸಿಸ್ ಶಾಲೆಯ ಶಿಕ್ಷಕರು ಶಿಕ್ಷಕೇತರ ಬಂಧುಗಳು ಸಹಕರಿಸಿದರು. ನಿವೃತ್ತ ಶಿಕ್ಷಕ ಹಿರಿಯ ಸ್ಕೌಟರ್ ಬಾಬು ಪೂಜಾರಿ ಆಗಮಿಸಿದ್ದರು ಕಾರ್ಕಳ ತಾಲೂಕಿನ ನಾನೂರಕ್ಕೂ ಮಿಕ್ಕಿ ಪರೀಕ್ಷಾರ್ಥಿಗಳು ಭಾಗವಹಿಸಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page