
ಹೊಸದಿಲ್ಲಿ: ಎಥನಾಲ್ ಮಿಶ್ರಿತ E20 ಪೆಟ್ರೋಲ್ ವಾಹನಗಳಿಗೆ ಹಾನಿ ಉಂಟುಮಾಡುತ್ತದೆ ಎಂಬ ಆರೋಪಗಳನ್ನು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಳ್ಳಿಹಾಕಿದ್ದಾರೆ. ಮಂಗಳವಾರ ನಡೆದ ವಿಕಸಿತ್ ಭಾರತ್ ಕಾನ್‌ಕ್ಲೇವ್ನಲ್ಲಿ ಮಾತನಾಡಿದ ಅವರು, E20 ಪೆಟ್ರೋಲ್‌ನಿಂದ ಹಾನಿಗೊಳಗಾದ ಒಂದೇ ಒಂದು ಕಾರನ್ನು ತೋರಿಸಿದರೆ ಸಾಕು ಎಂದು ಸವಾಲು ಹಾಕಿದರು.
E20 ಪೆಟ್ರೋಲ್‌ನಿಂದ ದೇಶದಲ್ಲಿ ಯಾವುದೇ ಕಾರಿಗೆ ಸಮಸ್ಯೆ ಉಂಟಾಗಿದೆ ಎಂಬುದಕ್ಕೆ ಸಾಕ್ಷ್ಯವಿಲ್ಲ. ಎಥನಾಲ್ ಮಿಶ್ರಿತ ಇಂಧನದ ವಿರುದ್ಧ ಹರಡುತ್ತಿರುವ ಮಾಹಿತಿ ಸುಳ್ಳು ಹಾಗೂ ಪ್ರಾಯೋಜಿತ ಅಭಿಯಾನದ ಭಾಗವಾಗಿದೆ ಎಂದು ಅವರು ಆರೋಪಿಸಿದರು.
ಇತ್ತೀಚೆಗೆ E20 ಪೆಟ್ರೋಲ್ ಬಳಕೆಯಿಂದ ಇಂಧನ ದಕ್ಷತೆ ಕುಸಿತ, ಹಳೆಯ ವಾಹನಗಳಲ್ಲಿ ಹೊಂದಾಣಿಕೆ ಸಮಸ್ಯೆ ಹಾಗೂ ಇಂಜಿನ್ ಮೇಲೆ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ. ಆದರೆ ಕಚ್ಚಾ ತೈಲ ಆಮದು ಕಡಿಮೆ ಮಾಡುವುದು, ಕಾರ್ಬನ್ ಹೊರಸೂಸುವಿಕೆ ತಗ್ಗಿಸುವುದು ಮತ್ತು ರೈತರಿಗೆ ಬೆಂಬಲ ನೀಡುವ ಉದ್ದೇಶದಿಂದ ಭಾರತ ಪೆಟ್ರೋಲ್‌ಗೆ ಶೇ.20 ಎಥನಾಲ್ ಮಿಶ್ರಣ ಮಾಡುವ ಗುರಿಯನ್ನು ಈಗಾಗಲೇ ಸಾಧಿಸಿದೆ ಎಂದು ಅವರು ತಿಳಿಸಿದರು.











































