
ನಟಿ ಕಂಗನಾ ರಣಾವತ್ ಚಂಡೀಗಡ ವಿಮಾನ ನಿಲ್ದಾಣಕ್ಕೆ ಬಂದಾಗ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಐಎಸ್ಎಫ್ ಎಂಬ ಮಹಿಳಾ ಸಿಬ್ಬಂದಿಯು ಕಂಗನಾ ರಣಾವತ್ ಅವರಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಇದೀಗ ಅವರು ಕಾರಣ ತಿಳಿಸಿದ್ದು ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ.
2020-21 ರಲ್ಲಿ ನಡೆದ ರೈತರ ಚಳುವಳಿಯಲ್ಲಿ ಕುಲ್ವಿಂದರ್ ಕೌರ್ ಅವರ ತಾಯಿ ಪಾಲ್ಗೊಂಡಿದ್ದು ಆಗ ಕಂಗನಾ ಅವರು ರೈತ ಚಳುವಳಿ ವಿರುದ್ಧ ಹೇಳಿಕೆ ನೀಡಿದ್ದರಿಂದ ಆಕ್ರೋಶಕ್ಕೆ ಒಳಗಾಗಿದ್ದ ಕುಲ್ವಿಂದರ್ ಕೌರ್ ಅವರು ಜೂನ್ 6ರಂದು ಕಂಗನಾ ರಣಾವತ್ ಅವರ ಕೆನ್ನೆಗೆ ಬಾರಿಸಿದ್ದಾರೆ.
ಇದೀಗ ಕುಲ್ವಿಂದರ್ ಕೌರ್ ಅವರನ್ನು ವಶಕ್ಕೆ ಪಡೆಯಲಾಗಿದ್ದು ತನಿಖೆ ನಡೆಯುತ್ತಿದೆ.