
ಕರಕರಿ ಫ್ರೆಂಡ್ಸ್ ಸೇವಾ ಬಳಗ ರಿ. ಕರ್ನಾಟಕ ಇದರ 5ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮ ವಿಜೇತ ವಿಶೇಷ ಶಾಲೆಯಲ್ಲಿ ವಿಜೃಂಭಣೆಯಿಂದ ನೆರವೇರಿತು.
ಉದ್ಘಾಟನಾ ಕಾರ್ಯಕ್ರಮವನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರು ವಿ. ಸುನಿಲ್ ಕುಮಾರ್ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸಭಾಧ್ಯಕ್ಷತೆಯನ್ನು ಕರಕರಿ ಫ್ರೆಂಡ್ಸ್ ಸಂಸ್ಥೆಯ ಅಧ್ಯಕ್ಷರಾದ ವಿತಿನ್ ಶೆಟ್ಟಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷರಾದ ಅವಿನಾಶ್ ಶೆಟ್ಟಿ , ಹಿರಿಯ ಬಸ್ ಡ್ರೈವರ್ ಕೃಷ್ಣ ಕುಮಾರ್ ಭಟ್ , ಹಿರಿಯ ಬಸ್ ಕಂಡಕ್ಟರ್ ಜಯಪ್ರಕಾಶ್ ಶೆಟ್ಟಿ ಸಮಾಜ ಸೇವಕಿ ನೀತಾ ಪ್ರಭು ಇವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಕರಕರಿ ಫ್ರೆಂಡ್ಸ್ ಸಂಸ್ಥೆಯ ಸೇವಾ ಕಾರ್ಯಕ್ರಮದಲ್ಲಿ ವಿಜೇತ ವಿಶೇಷ ಶಾಲೆಗೆ ಅವಶ್ಯಕವಿರುವ ಪಂಪ್ ಸೆಟ್ ಹಸ್ತಾಂತರಿಸಿದರು .
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಬೈಲೂರು ಇದರ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ, ಅಮ್ಮನ ನೆರವು ಟ್ರಸ್ಟ್ ನ ಸ್ಥಾಪಕರಾದ ಅವಿನಾಶ್ ಜಿ ಶೆಟ್ಟಿ , ಕರಕರಿ ಫ್ರೆಂಡ್ಸ್ ನ ಮಾಜಿ ಅಧ್ಯಕ್ಷರಾದ ಸದಾನಂದ್ ಸಾಲ್ಯಾನ್ ಮಾಜಿ ಅಧ್ಯಕ್ಷರಾದ ಸಂತೋಷ್ ಅಮೀನ್, ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ
ಕರಕರಿ ಫ್ರೆಂಡ್ಸ್ ಸೇವಾ ಬಳಗ ರಿ. ಕರ್ನಾಟಕ ಇದರ ಪದಾಧಿಕಾರಿಗಳು, ವಿಜೇತ ಶಾಲಾ ಸಿಬ್ಬಂದಿ ವರ್ಗ, ಮಕ್ಕಳು ಉಪಸ್ಥಿತರಿದ್ದರು.
ಶ್ರೀಕಾಂತ್ ಪ್ರಭು ಪಳ್ಳಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಕಾಶ್ ನಾಯ್ಕ್ ಸ್ವಾಗತಿಸಿ, ಆನಂದ್ ಪೂಜಾರಿ ಪ್ರಾಸ್ತಾವಿಕ ಮಾತನಾಡಿ, ಸಣ್ಣು ಶೇಖರ್ ವಂದಿಸಿದರು.





















































































