
ಉಡುಪಿ: ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿ ಜಲಪ್ರಳಯ ಸಂಭವಿಸಿರುವ ಹಿನ್ನೆಲೆಯಲ್ಲಿ, ಅಲ್ಲಿಗೆ ಪ್ರವಾಸ ಅಥವಾ ಯಾತ್ರೆಗೆ ತೆರಳಿ ಸಿಲುಕಿರುವ ಉಡುಪಿ ಜಿಲ್ಲೆಯವರ ನೆರವಿಗಾಗಿ ಜಿಲ್ಲಾಡಳಿತ ತುರ್ತು ಸಹಾಯವಾಣಿ ಆರಂಭಿಸಿದೆ.
ಸಂಕಷ್ಟದಲ್ಲಿರುವವರ ಹೆಸರು, ವಿಳಾಸ, ನಿಖರ ಸ್ಥಳ, ಮೊಬೈಲ್ ಸಂಖ್ಯೆ ಸೇರಿದಂತೆ ವಿವರಗಳನ್ನು 1077 ಅಥವಾ 0820-25748028 ಸಂಖ್ಯೆಗೆ ನೀಡುವಂತೆ ಡಿಸಿ ಕಚೇರಿ ತಿಳಿಸಿದೆ.
ನೇಪಾಳದ ನೆರೆ ಪೀಡಿತ ಪ್ರದೇಶಗಳಲ್ಲಿ ಕೊಡಗು ಜಿಲ್ಲೆಯವರು ಸಿಲುಕಿದ್ದರೆ, ಅವರ ಕುಟುಂಬಸ್ಥರು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಮಾಹಿತಿ ನೀಡುವಂತೆ ಪ್ರಾಧಿಕಾರ ಮನವಿ ಮಾಡಿದೆ.
ಕೊಡಗು: 08272-221077, 08272-221099
ವಾಟ್ಸ್ಆ್ಯಪ್: 8550001077





















































































