28.2 C
Udupi
Friday, June 26, 2026
spot_img
spot_img
HomeBlogಉಡುಪಿ ಜಿಲ್ಲೆಯಲ್ಲಿ ಪ್ರಥಮವಾಗಿ, NABH 6ನೇ ಆವೃತ್ತಿಯ ಮಾನ್ಯತೆ ಪಡೆದ ಡಾ ಟಿ.ಎಂ.ಎ ಪೈ ರೋಟರಿ...

ಉಡುಪಿ ಜಿಲ್ಲೆಯಲ್ಲಿ ಪ್ರಥಮವಾಗಿ, NABH 6ನೇ ಆವೃತ್ತಿಯ ಮಾನ್ಯತೆ ಪಡೆದ ಡಾ ಟಿ.ಎಂ.ಎ ಪೈ ರೋಟರಿ ಆಸ್ಪತ್ರೆ ಕಾರ್ಕಳ

ಕಾರ್ಕಳ, ಜೂನ್ 24, 2026: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಅಧೀನದಲ್ಲಿರುವ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ, ಕಾರ್ಕಳವು ರಾಷ್ಟ್ರೀಯ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವಾ ಪೂರೈಕೆದಾರರ ಮಾನ್ಯತಾ ಮಂಡಳಿ (NABH) ಯಿಂದ ಮಾನ್ಯತೆ ಪಡೆದಿದೆ. ಆಸ್ಪತ್ರೆಯು NABH ಆಸ್ಪತ್ರೆಗಳ ಮಾನ್ಯತಾ ಮಾನದಂಡಗಳ 6ನೇ ಆವೃತ್ತಿಯ ಎಲ್ಲಾ ಅಗತ್ಯ ಮಾನದಂಡಗಳನ್ನು ಪೂರೈಸಿರುವುದಾಗಿ ದೃಢೀಕರಿಸಲಾಗಿದೆ.

ಈ ಮಾನ್ಯತೆ ಆಸ್ಪತ್ರೆಯ 80 ಹಾಸಿಗೆಗಳಿಗೆ ಅನ್ವಯವಾಗಿದ್ದು, 2026ರ ಮೇ 21ರಿಂದ 2030ರ ಮೇ 20ರವರೆಗೆ ಮಾನ್ಯವಾಗಿರುತ್ತದೆ. NABH ಅನ್ನು ಅಂತರರಾಷ್ಟ್ರೀಯ ಆರೋಗ್ಯ ಗುಣಮಟ್ಟ ಸಂಸ್ಥೆ (ISQua) ಮಾನ್ಯತೆ ನೀಡಿರುವುದರಿಂದ, ಇದರ ಮಾನದಂಡಗಳು ಭಾರತದಲ್ಲಿಯೂ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಅಂಗೀಕರಿಸಲ್ಪಟ್ಟಿವೆ.

ಈ ಮಾನ್ಯತೆಯನ್ನು ಪಡೆಯುವ ಸಲುವಾಗಿ ಆಸ್ಪತ್ರೆಯನ್ನು ರೋಗಿಗಳ ಚಿಕಿತ್ಸೆ, ಸುರಕ್ಷತಾ ಕ್ರಮಗಳು, ಸ್ವಚ್ಛತೆ, ಸೋಂಕು ನಿಯಂತ್ರಣ ಹಾಗೂ ದೈನಂದಿನ ಕಾರ್ಯಾಚರಣೆ ಸೇರಿದಂತೆ ಹಲವಾರು ಅಂಶಗಳಲ್ಲಿ ಮೌಲ್ಯಮಾಪನ ಮಾಡಲಾಯಿತು. ಈ ಮಾನ್ಯತೆ ಆಸ್ಪತ್ರೆಯು ನಿಗದಿತ ಗುಣಮಟ್ಟದ ಆರೈಕೆ ಮಾನದಂಡಗಳನ್ನು ಪಾಲಿಸುತ್ತಿದೆ ಎಂಬ ಭರವಸೆಯನ್ನು ರೋಗಿಗಳಿಗೆ ನೀಡುತ್ತದೆ.

ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಸಂಜಯ್ ಕುಮಾರ್ ಅವರು ಮಾತನಾಡಿ, ಈ ಮಾನ್ಯತೆ ಸಂಪೂರ್ಣ ತಂಡದ ಪರಿಶ್ರಮದ ಫಲವಾಗಿದೆ ಎಂದು ಹೇಳಿದರು. “ಇಲ್ಲಿನ ಪ್ರತಿಯೊಬ್ಬ ವೈದ್ಯರು, ನರ್ಸ್‌ಗಳು ಹಾಗೂ ಸಿಬ್ಬಂದಿಗಳು ಈ ಮಾನದಂಡಗಳನ್ನು ಅನುಸರಿಸಲು ಒಟ್ಟಾಗಿ ಶ್ರಮಿಸಿದ್ದಾರೆ. ಇದು ಅವರ ಪರಿಶ್ರಮಕ್ಕೆ ದೊರೆತ ಮಾನ್ಯತೆ. ಮುಂದೆಯೂ ನಮ್ಮ ರೋಗಿಗಳಿಗೆ ಸುರಕ್ಷಿತ ಹಾಗೂ ಉತ್ತಮ ಗುಣಮಟ್ಟದ ಆರೈಕೆಯನ್ನು ನೀಡಲು ನಾವು ಬದ್ಧರಾಗಿದ್ದೇವೆ,” ಎಂದು ಅವರು ಹೇಳಿದರು.

ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಧಾಕರ್ ಕಂಟಿಪುಡಿ ಅವರು ಮಾತನಾಡಿ, ಇದು ಆಸ್ಪತ್ರೆ ಹಾಗೂ ಮಾಹೆಗೆ ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದರು. “ಕಾರ್ಕಳದಂತಹ ಗ್ರಾಮೀಣ ಪ್ರದೇಶದ ಆಸ್ಪತ್ರೆಗೆ NABH ಮಾನ್ಯತೆ ಬಹಳ ಮಹತ್ವದ್ದಾಗಿದೆ. ಈ ಭಾಗದ ಜನರು ನಗರಗಳಿಗೆ ದೂರ ಪ್ರಯಾಣ ಮಾಡದೇ ಇಲ್ಲಿಯೇ ಅದೇ ಮಟ್ಟದ ಸುರಕ್ಷಿತ ಮತ್ತು ಗುಣಮಟ್ಟದ ಆರೋಗ್ಯ ಸೇವೆಯನ್ನು ಪಡೆಯಬಹುದು ಎಂಬ ವಿಶ್ವಾಸವನ್ನು ಇದು ನೀಡುತ್ತದೆ. ನಮ್ಮ ಎಲ್ಲಾ ಆಸ್ಪತ್ರೆಗಳಲ್ಲೂ ಗುಣಮಟ್ಟದ ಆರೈಕೆಯನ್ನು ಒದಗಿಸುವ ಬದ್ಧತೆಯ ಪ್ರತೀಕವೇ ಈ ಮಾನ್ಯತೆ. ಇದೇ ಮಟ್ಟದ ಗುಣಮಟ್ಟವನ್ನು ನಮ್ಮ ಇತರ ಘಟಕಗಳಲ್ಲಿಯೂ ತರಲು ನಾವು ಮುಂದುವರೆಯುತ್ತೇವೆ,” ಎಂದು ಅವರು ಹೇಳಿದರು.

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ NABH ಮಾನ್ಯತಾ ಪ್ರಮಾಣಪತ್ರವನ್ನು ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ, ಕಾರ್ಕಳದ ಮುಖ್ಯ ವೈದ್ಯಾಧಿಕಾರಿ ಡಾ. ಸಂಜಯ್ ಕುಮಾರ್ ಹಾಗೂ ಅವರ ಹಿರಿಯ ಸಹೋದ್ಯೋಗಿಗಳಿಗೆ ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಕುಲಪತಿ ಡಾ. ಶರತ್ ಕೆ. ರಾವ್, ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿ ಮೇಜರ್ ಜನರಲ್ (ಡಾ.) ಮ್ಯಾಥ್ಯೂಸ್ ಜೇಕಬ್, VSM ಹಾಗೂ ಗುಣಮಟ್ಟ ನಿರ್ದೇಶಕ ಡಾ. ಕ್ರಿಸ್ಟೋಫರ್ ಸುಧಾಕರ್ ಅವರು ಅಧಿಕೃತವಾಗಿ ಹಸ್ತಾಂತರಿಸಿದರು.

ಈ ಮಾನ್ಯತಾ ಪ್ರಯಾಣಕ್ಕೆ ಡಾ. ಕೀರ್ತಿನಾಥ್ ಬಲ್ಲಾಳ್ ಅವರ ದೂರದೃಷ್ಟಿಯ ನಾಯಕತ್ವವೇ ಪ್ರಮುಖ ಪ್ರೇರಣೆಯಾಗಿತ್ತು. ಈ ಸಂದರ್ಭದಲ್ಲಿ ಮಾಹೆ , ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಹಾಗೂ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ, ಕಾರ್ಕಳದ ಹಲವು ಗಣ್ಯರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ಸಂಸ್ಥೆಯ ಗುಣಮಟ್ಟದ ಆರೋಗ್ಯ ಸೇವಾ ಪಯಣದ ಈ ಮಹತ್ವದ ಸಾಧನೆಯನ್ನು ಸಂಭ್ರಮಿಸಿದರು.

ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯು ಹಲವು ವರ್ಷಗಳಿಂದ ಕಾರ್ಕಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಆರೋಗ್ಯ ಸೇವೆ ನೀಡುತ್ತಿದೆ. ಈ NABH ಮಾನ್ಯತೆಯೊಂದಿಗೆ, ಉತ್ತಮ ಹಾಗೂ ಸುರಕ್ಷಿತ ಆರೋಗ್ಯ ಸೇವೆಯನ್ನು ಒದಗಿಸಲು ಕಾರ್ಯನಿರ್ವಹಿಸುತ್ತಿರುವ ಮಾಹೆ ಭೋದನಾ ಆಸ್ಪತ್ರೆಗಳ ಇತರ ಘಟಕಗಳ ಸಾಲಿಗೆ ಈ ಆಸ್ಪತ್ರೆಯೂ ಸೇರ್ಪಡೆಯಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page