31.8 C
Udupi
Thursday, April 23, 2026
spot_img
spot_img
HomeBlogಸಾಣೂರು: ಮುರತಂಗಡಿ ಪರಿಸರದಲ್ಲಿ ಅವಹೇಳನಕಾರಿ ಪ್ಲೆಕ್ಸ್ ಅಳವಡಿಕೆ, ಸ್ಥಳೀಯರಿಂದ ಆಕ್ರೋಶ

ಸಾಣೂರು: ಮುರತಂಗಡಿ ಪರಿಸರದಲ್ಲಿ ಅವಹೇಳನಕಾರಿ ಪ್ಲೆಕ್ಸ್ ಅಳವಡಿಕೆ, ಸ್ಥಳೀಯರಿಂದ ಆಕ್ರೋಶ

ಕಾರ್ಕಳ: ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅವಹೇಳನಕಾರಿ ಫ್ಲೆಕ್ಸ್ ಅಳವಡಿಕೆಯ ಕುರಿತು ದೂರು ದಾಖಲಾಗಿದ್ದು ಅದೇನೆಂದರೆ ಸಾಣೂರಿನ ಮುರತಂಗಡಿ ಸಮೀಪ ಪ್ರಶಾಂತ್ ಕ್ಯಾಶು ಫ್ಯಾಕ್ಟರಿ ಬಳಿ ಇರುವ ಹಳೆ ಶೆಡ್ನಲ್ಲಿ ಫ್ಲೆಕ್ಸ್ ಒಂದನ್ನು ಅಳವಡಿಸಿದ್ದು ಅದರಲ್ಲಿ “ಹಿಂದೂ ಹೆಣ್ಣು ಮಕ್ಕಳ ತಂಟೆಗೆ ಮೈಮುಟ್ಟಲು ಬಂದ ಪೋರ್ಕಿ ಮುಂಡು ಬ್ಯಾರಿಗಳೇ, ಹುಷಾರ್” ಎಂದು ಬರೆದು ಅದರ ಕೆಳಗೆ ಇಂಗ್ಲಿಷ್ನಲ್ಲಿ ‘one of the freedom fighter’ (one of the department) ಎಂದು ಬರೆದು ಯುವಕನೊಬ್ಬನ ಭಾವಚಿತ್ರವನ್ನು ಹಾಕಿ ಅಳವಡಿಸಲಾಗಿತ್ತು.

ಇದು ಉದ್ದೇಶಪೂರ್ವಕವಾಗಿ ಒಂದು ವರ್ಗವನ್ನು ಅಥವಾ ಸಮುದಾಯವನ್ನು ಪ್ರಚೋದಿಸಲು ಅಳವಡಿಸಿರುವ ಫ್ಲೆಕ್ಸ್ ನಂತೆ ಕಂಡುಬಂದಿದ್ದು ಅನುಮತಿ ಪಡೆಯದೆ ಅಳವಡಿಸಿರುವ ಸತೀಶ್ ಎಂಬ ವ್ಯಕ್ತಿ ಹಾಗೂ ಆತನಿಗೆ ಫ್ಲೆಕ್ಸ್ ಮುದ್ರಿಸಿ ಕೊಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪಿಡಿಓ ಮಧು ಎಂಸಿ ಕಾರ್ಕಳ ನಗರ ಪೊಲೀಸ್ ಠಾಣಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಇದಲ್ಲದೆ ಸ್ಥಳೀಯರಿಂದಲೂ ಕೂಡ ಫ್ಲಕ್ಸ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು ಮುರತಂಗಡಿ ಪರಿಸರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಿದ್ದರೂ ಉದ್ದೇಶಪೂರ್ವಕವಾಗಿ ಪ್ರಚೋದಿಸುವ ಸಲುವಾಗಿ ಫ್ಲಕ್ಸ್ ಅಳವಡಿಸಲಾಗಿದೆ. ಶಾಂತಿ ಕದಡುವ ಉದ್ದೇಶದಿಂದ ಈ ಕೃತ್ಯ ಎಸಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page