ವಿಶ್ವ ಪೌಷ್ಟಿಕಾಂಶಗಳ ದಿನಾಚರಣೆ

ದಿನಾಂಕ ಸೆ. 9 ರಂದು ತಾಲೂಕು ಕಾನೂನು ಸೇವೆಗಳ ಸಮಿತಿ ನ್ಯಾಯವಾದಿಗಳ ಸಂಘ ಹಾಗೂ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ pervaje ಇದರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪೌಷ್ಟಿಕಾಂಶಗಳ ದಿನಾಚರಣೆಯು ಯಶಸ್ವಿಯಾಗಿ ಜರಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಅಬತಾಹಿರ್, ಗೌರವಾನ್ವಿತ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಹೆಚ್ ಎಂ ಎಫ್ ಸಿ ನ್ಯಾಯಾಧೀಶರು ಕಾರ್ಕಳ ಇವರು ಸಸ್ಯ ಪೋಷಣೆಯ ಸಲುವಾಗಿ ಸಸ್ಯವೊಂದಕ್ಕೆ ನೀರು ಉಣಿಸುವುದರ ಮೂಲಕ ನೆರವೇರಿಸಿದರು . ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ವಾಹನ ಮತ್ತು ಇಂಧನ ಉದಾಹರಣೆ ಯೊಂದಿಗೆ ದೇಹಕ್ಕೆ ಪೌಷ್ಟಿಕಾಂಶ ಯಾಕೆ ಬೇಕು ಎನ್ನುವುದನ್ನು ತಿಳಿಸಿದರು. ಹಿರಿಯ ನ್ಯಾಯವಾದಿ ಹಾಗೂ ನಿಕಟ ಪೂರ್ವ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಿಜಯರಾಜ ಶೆಟ್ಟಿ ಹೊರಗಿನ ಫಾಸ್ಟ್ ಫುಡ್ ಗಳಿಗೆ ಮನಸೋಲದೆ ಮನೆಯಲ್ಲಿ ಪೋಷಕರು ಮಾಡಿದ ಆಹಾರವನ್ನು ಸ್ವೀಕರಿಸಲು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಸಂಪನ್ಮೂಲ ವ್ಯಕ್ತಿಗಳಾದ ನ್ಯಾಯವಾದಿ ವಿಜಯ ಗಿರೀಶ ವಿವಿಧ ಪೋಷಕ ಅಂಶಗಳ ಬಗ್ಗೆ, ಅದರ ಕೊರತೆಯಿಂದ ಬರುವ ರೋಗಗಳ ಬಗ್ಗೆ ತಿಳಿ ಹೇಳುತ್ತಾ ಆರೋಗ್ಯ ಇದ್ದವರೇ ಇಂದಿನ ಯುಗದಲ್ಲಿ ಹೆಚ್ಚು ಶ್ರೀಮಂತರು ಎಂದು ಕಿವಿ ಮಾತನ್ನಾಡಿದರು. ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಆನಂದರಾಯ ನಾಯಕ ವಿದ್ಯಾರ್ಥಿಗಳು ಮನೆಯ ಆಹಾರವನ್ನು ಸೇವಿಸಿ ಶಾಲೆಗೆ ಬರುವಂತೆ ತಿಳಿಸಿದರು. ಶಾಲೆಯ ಮುಖ್ಯ ಶಿಕ್ಷಕ ದಿವಾಕರ್ ಆಗಮಿಸಿದ ಎಲ್ಲಾ ಗಣ್ಯರನ್ನು ಸ್ವಾಗತಿಸಿದರು. ವಿಜ್ಞಾನ ಶಿಕ್ಷಕಿ ಲಲಿತ ಕಾರ್ಯಕ್ರಮ ನಿರೂಪಿಸಿ, ಗಣಿತ ಶಿಕ್ಷಕಿ ಶಂಕರಿ ಭಟ್ ವಂದಿಸಿದರು.













