25.8 C
Udupi
Friday, November 20, 2026
spot_img
spot_img
HomeBlogಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ, ಮಾಜಿ ಪ್ರಧಾನಿ ಭಾರತರತ್ನ ದಿ.ಇಂದಿರಾಗಾಂಧಿ ಜಯಂತಿ ಆಚರಣೆ

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ, ಮಾಜಿ ಪ್ರಧಾನಿ ಭಾರತರತ್ನ ದಿ.ಇಂದಿರಾಗಾಂಧಿ ಜಯಂತಿ ಆಚರಣೆ

ದೇಶದ ಪ್ರಪ್ರಥಮ ಮಹಿಳಾ ಪ್ರಧಾನಿಯಾಗಿ ಗರೀಭಿ ಹಠಾವೊ, ಉಳುವವನೆ ಹೊಲದೊಡೆಯ, ಬ್ಯಾಂಕ್ ರಾಷ್ಟ್ರೀಕರಣ ಮುಂತಾದ ಯೋಜನೆಗಳನ್ನು ಜಾರಿಗೊಳಿಸಿ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ಕೀರ್ತಿ ದಿ. ಶ್ರೀಮತಿ ಇಂದಿರಾ ಗಾಂಧಿಯವರಿಗೆ ಸಲ್ಲಬೇಕು ಎಂದು ಕಾಂಗ್ರೆಸ್ ನಾಯಕ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ನಿರ್ದೇಶಕ ಶ್ರೀ ಶೇಖರ್ ಮಡಿವಾಳ್ ಹೇಳಿದರು.

ಕಾರ್ಕಳ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಇಂದಿರಾ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಡವರ ಪರವಾಗಿ, ಜನ ಸಾಮಾನ್ಯರ ಪರವಾಗಿ ಇಂದಿರಾ ಅವರ ನಿಲುವು, ಅಭಿವೃದ್ಧಿ ಪರವಾದ ಚಿಂತನೆಗಳು ವಿವಿಧ ರೂಪದಲ್ಲಿ ಇಂದಿಗೂ ಜಾರಿಯಲ್ಲಿದೆ, ಅಂತಾ ಮಹಾನ್ ವ್ಯಕ್ತಿತ್ವವನ್ನು ನೆನೆಯುವುದು ನಮ್ಮ ಕರ್ತವ್ಯ ಎಂದು ಅವರು ಹೇಳಿದರು.

ನಿವೃತ್ತ ಉಪನ್ಯಾಸಕ ಹಾಗೂ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರಾದ ದೇವದಾಸ್ ಆರ್ ಅವರು ಇಂದಿರಾ ಗಾಂಧಿಯವರ ಭಾವಚಿತ್ರಕ್ಕೆ ದೀಪ ಬೆಳಗಿ ಪುಷ್ಪಾರ್ಚನೆಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ ರಾವ್ ಅವರು ಅತಿಥಿಗಳನ್ನು ಸ್ವಾಗತಿಸಿ ಇಂದಿರಾ ಗಾಂಧಿ ಜಯಂತಿ ಆಚರಣೆಯ ಕುರಿತು ಪ್ರಸ್ತಾವಿಕ ಮಾತನಾಡಿ ಕೋಟ್ಯಾಂತರ ಜನರಿಗೆ ಸ್ವಂತ ಭೂಮಿಯ ಹಕ್ಕನ್ನು ನೀಡಿದ ಇಂದಿರಾಜಿ ನಮಗೆ ದೇವರ ಸಮಾನರು ಎಂದರು. ರಾಷ್ಟೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ರತ್ನವೂ ಸೇರಿದಂತೆ ಸುಮಾರು 63 ಪ್ರಶಸ್ತಿಯ ಗೌರವಕ್ಕೆ ಪಾತ್ರರಾದ ಭಾರತ ಏಕೈಕ ವ್ಯಕ್ತಿ ‌ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಬಿಪಿನ್ ಚಂದ್ರಪಾಲ್ ನಕ್ರೆ ಅವರು ಮಾತನಾಡಿ ಮಹಿಳಾ ಸಬಲೀಕರಣದ ಚಿಂತನೆ ಹುಟ್ಟಿದ್ದೇ ಇಂದಿರಾ ಗಾಂಧಿ ಪ್ರಧಾನಿಯಾದ ನಂತರ. ಇಂದಿರಾ ಗಾಂಧಿಯವರು 20 ಅಂಶಗಳ ಕಾರ್ಯಕ್ರಮವನ್ನು ಜಾರಿಗೊಳಿಸಿ ಸರ್ವರಿಗೂ ಸಮಬಾಳು ಸಮಪಾಲು ದ್ಯೇಯದೊಂದಿಗೆ ಬಡವರಿಗೂ ಹಕ್ಕುಗಳನ್ನು ನೀಡಿದರು. ಬಡವನಿಗೆ ಊಟ, ಬಡವನಿಗೆ ಭೂಮಿ, ಬಡವನಿಗೆ ಉದ್ಯೋಗ ನೀಡುವ ಇಂದಿರಾ ಗಾಂಧಿಯವರ ಈ ಜನಪರ ನೀತಿಯ ವಿರುದ್ದ ಕೆಲವೊಂದು ಶಕ್ತಿಗಳು ವಿರೋದ ವ್ಯಕ್ತಪಡಿಸಿದ್ದು ದುರಂತ ಎಂದರು, ಇಂದಿರಾ ಗಾಂಧಿಯವರ ಹತ್ಯೆ ಅದು ಪ್ರಜಾಪ್ರಭುತ್ವದ ಹತ್ಯೆ ಎಂದರು.

ಕೆಡಿಪಿ ನಾಮನಿರ್ಧೇಶನ ಸದಸ್ಯರಾದ ಎಂ.ಪಿ ಮೊಯಿದ್ದೀನ್ ಇನ್ನಾ ಸಂದರ್ಭೋಚಿತವಾಗಿ ಮಾತನಾಡಿದರು.

ಸಭೆಯಲ್ಲಿ ಭ್ಯೂನ್ಯಾಯ ಮಂಡಳಿ ಸದಸ್ಯ ಸುನೀಲ್ ಭಂಡಾರಿ, ಪುರಸಭಾ ಮಾಜಿ ಅಧ್ಯಕ್ಷೆ ರೆಹಮತ್, ಕೆಡಿಪಿ ಸದಸ್ಯ ರುಕ್ಮಯ ಶೆಟ್ಟಿಗಾರ್, ಗ್ಯಾರಂಟಿ ಸಮಿತಿ ಸದಸ್ಯರಾದ ವಿಶ್ವನಾಥ ಭಂಡಾರಿ, ಸಂತೋಷ್ ದೇವಾಡಿಗ, ಹೇಮಂತ್ ಆಚಾರ್ಯ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಭಾಸ್ಕರ್, ಮಹಿಳಾ ಪಧಾದಿಕಾರಿಗಳಾದ ಶೋಭಾ ಪ್ರಸಾದ್ ಕಾಂತಿ ಅಧ್ಯಕ್ಷೆ ಮೊದಲಾದವರು ಉಪಸ್ಥಿತರಿದ್ದರು.

ನಗರ ಮಹಿಳಾ ಅಧ್ಯಕ್ಷೆ ರೀನಾ ಜೂಲಿಯೆಟ್ ಸ್ವಾಗತಿಸಿ ಬ್ಲಾಕ್ ಕಾರ್ಯದರ್ಶಿ ಜೋಕಿಂ ಪಿಂಟೋ ಧನ್ಯವಾದವಿತ್ತರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page