
ಕಾರ್ಕಳ: ಮಾಳ ಗ್ರಾಮದ ನಿವಾಸಿ ತಂಗಚ್ಚನ್ ಮಗ ಸಂತೋಷ್ ಟಿ.ಎಂಬವನು ಮುಡಾರು ಗ್ರಾಮದ ಗುರ್ಗಾಲ್ ಗುಡ್ಡೆಯ ಮನೆಯೊಂದರ ಬೀಗವನ್ನು ಒಡೆದು ಚಿನ್ನ ಕಳ್ಳತನ ಮಾಡಿದ್ದು ಇದೀಗ ಕಾರ್ಕಳ ಗ್ರಾಮಂತರ ಠಾಣೆ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಗಸ್ಟ್ 30ರಂದು ಗುರ್ಗಾಲ್ ಗುಡ್ಡೆಯ ಮನೆಯಲ್ಲಿ ಮನೆ ಬಾಗಿಲು ಮುರಿದು ಬೆಡ್ರೂಮ್ ನ ಲಾಕರ್ ನಲ್ಲಿದ್ದ 33 ಪವನ್ ಮೌಲ್ಯದ ವಿವಿಧ ರೀತಿಯ ಚಿನ್ನಾಭರಣಗಳ ಕಳುವಾಗಿದ್ದು ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಆರೋಪಿಯನ್ನು ಯಶಸ್ವಿಯಾಗಿ ಬಂಧಿಸಿರುವ ಪೊಲೀಸರು 33 ಪವನ್ ಚಿನ್ನಾಭರಣದ ಜೊತೆಗೆ ಕೃತ್ಯಕ್ಕೆ ಬಳಸಿದ್ದ ಬೈಕನ್ನು ವಶಪಡಿಸಿಕೊಂಡಿದ್ದಾರೆ.
ಗ್ರಾಮಾಂತರ ಠಾಣಾ ಪಿಎಸ್ಐ ದಿಲೀಪ್ ಜಿ. ಆರ್ , ತನಿಖಾ ವಿಭಾಗದ ಪಿಎಸ್ಐ ಸುಂದರ ಹಾಗೂ ಸಿಬ್ಬಂದಿ ಮಹಾಂತೇಶ್, ಪ್ರಶಾಂತ್ ಕೆ, ವಿಶ್ವನಾಥ, ಶಶಿಕುಮಾರ್, ನಾಗರಾಜ, ಗೋವಿಂದ ಆಚಾರಿ, ರಾಘವೇಂದ್ರ, ಅಶೋಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.













