
ಬಾಲಿವುಡ್ ನಟ ಸೈಫ್ ಅಲಿಖಾನ್ ರವರ ಮುಂಬೈ ಮನೆಯಲ್ಲಿ ಮಧ್ಯರಾತ್ರಿ ಕಳ್ಳರು ದರೋಡೆಗೆ ಯತ್ನಿಸಿದ್ದು, ಈ ವೇಳೆ ನಟ ತಡೆಯಲು ಯತ್ನಿಸಿದ ಕಾರಣ ಕಾರಣ ಚಾಕುವಿನಿಂದ ದಾಳಿ ನಡೆಸಿದ ಘಟನೆ ವರದಿಯಾಗಿದೆ.
ಘಟನೆಯಲ್ಲಿ ನಟ ಗಾಯಗೊಂಡಿದ್ದು ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೈಫ್ ಅಲಿ ಖಾನ್ ತನ್ನ ಮುಂಬೈನ ಬಾಂದ್ರಾ ದಲ್ಲಿರುವ ಮನೆಯಲ್ಲಿ ಮಲಗಿದ್ದ ಸಮಯ ಮುಂಜಾನೆ 2:30 ವೇಳೆಗೆ ಕಳ್ಳರು ಮನೆಗೆ ನುಗ್ಗಲು ಯತ್ನಿಸಿದ್ದು ಈ ಸಂದರ್ಭದಲ್ಲಿ ಹಲ್ಲೆ ನಡೆದಿದೆ ಎನ್ನಲಾಗುತ್ತಿದೆ.
ಕಳ್ಳರು 2-3 ಬಾರಿ ಹಲ್ಲೆ ನಡೆಸಿದ್ದಾರೆ. ನಾವು ತನಿಖೆ ಆರಂಭಿಸಿದ್ದೇವೆ. ನಟನಿಗೆ ಆರು ಗಾಯಗಳಾಗಿದ್ದು ಎರಡು ಕಡೆ ಗಂಭೀರ ಗಾಯವಾಗಿದ್ದು, ಬೆನ್ನಿನ ಮೂಳೆಗೆ ತೊಂದರೆ ಆಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.




















