
ನಾಳೆ ಡಿಸೆಂಬರ್ 9 ರಿಂದ ಕುಂದಾ ನಗರದ ಸುವರ್ಣ ಸೌಧದಲ್ಲಿ 11ನೇ ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದೆ.
ಸೋಮವಾರದಿಂದ ಆರಂಭಗೊಳ್ಳಲಿರುವ 10 ದಿನಗಳ ಕಾಲ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಟಾಪಟಿ ನಿರೀಕ್ಷೆಯಲ್ಲಿದೆ. ಮೂಡಾ ಹಗರಣ, ವಕ್ಫ್, ಬಾಣಂತಿಯರ ಸಾವಿನ ವಿಚಾರ ಗ್ಯಾರೆಂಟಿ ಅನುಷ್ಠಾನದಲ್ಲಿನ ಲೋಪ, ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡದಿರುವುದು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಆಡಳಿತ ಪಕ್ಷದ ಮೇಲೆ ಮುಗಿಬೀಳಲು ಸಜ್ಜಾಗಿವೆ.
ಇನ್ನು ಆಡಳಿತ ಪಕ್ಷ ಕೊರೋನಾ ಹಗರಣ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಮೇಲಿನ ಬಿಡಿಎ ಹಗರಣ ಆರೋಪ, ಲೈಂಗಿಕ ದೌರ್ಜನ್ಯ ಪ್ರಕರಣ ಯತ್ನಾಳ್ ವಿಚಾರ ಕುರಿತಂತೆ ಪ್ರತಿಪಕ್ಷಗಳನ್ನು ಕಟ್ಟಿಹಾಕುವ ಸರ್ವ ಸಿದ್ಧತೆ ನಡೆಸಿದೆ.



















