ಮೂಡುಬಿದಿರೆಯಲ್ಲಿ ಮೂರು ದಿನಗಳ ಹಲಸು–ಮಾವು ಮತ್ತು ಸ್ವದೇಶಿ ಉತ್ಪನ್ನಗಳ ಮೇಳ

ಮೂಡುಬಿದಿರೆ: ದೀಪಂ ಇವೆಂಟ್ಸ್ ಹಾಗೂ ನಮ್ಮ ಕಾರ್ಲ ಮೀಡಿಯಾ ಜಂಟಿ ಪ್ರಾಯೋಜಕತ್ವದಲ್ಲಿ “ಹಲಸು–ಮಾವು ಮತ್ತು ಸ್ವದೇಶಿ ಉತ್ಪನ್ನಗಳ ಮೇಳ” ವನ್ನು ಜುಲೈ 10, 11 ಹಾಗೂ 12ರಂದು ಮೂಡುಬಿದಿರೆಯ ಬಸ್‌ಸ್ಟ್ಯಾಂಡ್ ಬಳಿಯ ಸಮಾಜ ಮಂದಿರದ ‘ಸ್ವರ್ಣ ಮಂದಿರ’ದಲ್ಲಿ ಆಯೋಜಿಸಲಾಗಿದೆ.
ಮೇಳವು ಮೂರು ದಿನ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿದ್ದು, ಹಲಸು ಮತ್ತು ಮಾವಿನ ವಿವಿಧ ತಳಿಗಳ ಜೊತೆಗೆ ಸ್ವದೇಶಿ ಉತ್ಪನ್ನಗಳು, ಗ್ರಾಮೀಣ ಕೈಗಾರಿಕಾ ವಸ್ತುಗಳು ಹಾಗೂ ಸಾಂಪ್ರದಾಯಿಕ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಾಗಲಿವೆ.
“ವಿದೇಶಿ ವ್ಯಾಮೋಹ ತೊರೆಯಿರಿ, ಸ್ವದೇಶಿ ವಸ್ತುಗಳನ್ನು ಬೆಂಬಲಿಸಿ” ಎಂಬ ಧ್ಯೇಯದೊಂದಿಗೆ ನಡೆಯುವ ಈ ಮೇಳಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಸ್ವದೇಶಿ ಉತ್ಪನ್ನಗಳನ್ನು ಖರೀದಿಸಿ ಪ್ರೋತ್ಸಾಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9742513595 ಹಾಗೂ 9901350539 ಸಂಖ್ಯೆಯನ್ನು ಸಂಪರ್ಕಿಸಬಹುದು.










































