
ಇಂದು ಭಾನುವಾರ, 25 ಅಕ್ಟೋಬರ್ 2026, ಬೆಳಿಗ್ಗೆ 6:30ರಿಂದ 8:30ರವರೆಗೆ, ಕಾರ್ಕಳದ ಶ್ರೀ ರಾಘವೇಂದ್ರ ಮಠದ ಬಳಿ ನೆಡಲಾಗಿರುವ ನೇಪಿಯರ್ ಹುಲ್ಲಿನ ನಿರ್ವಹಣಾ ಕಾರ್ಯವನ್ನು ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ ನಡೆಸಲಾಯಿತು.
ಈ ಸೇವಾ ಕಾರ್ಯದಲ್ಲಿ ಸುಮಾರು 18 ಮಂದಿ ಸದಸ್ಯರು ಭಾಗವಹಿಸಿ ಶ್ರಮದಾನ ಮಾಡಿದರು.

ನೇಪಿಯರ್ ಹುಲ್ಲಿನ ಗಿಡಗಳ ಬುಡವನ್ನು ಅಚ್ಚುಕಟ್ಟುಗೊಳಿಸಿ, ಗಿಡಗಳ ಉತ್ತಮ ಬೆಳವಣಿಗೆಗಾಗಿ ಗೊಬ್ಬರ ಹಾಕಲು ಸೂಕ್ತ ರೀತಿಯಲ್ಲಿ ಸಿದ್ಧಪಡಿಸಲಾಯಿತು.
ಗೋಶಾಲೆಗಳಿಗೆ ವರ್ಷಪೂರ್ತಿ ಹಸಿರು ಮೇವಿನ ಕೊರತೆಯಾಗಬಾರದು ಎಂಬ ಉದ್ದೇಶದಿಂದ, ನೇಪಿಯರ್ ಹುಲ್ಲಿನ ಪೋಷಣೆ ಹಾಗೂ ನಿರ್ವಹಣಾ ಕಾರ್ಯವನ್ನು ಬ್ರಿಗೇಡ್ ನಿರಂತರವಾಗಿ ಮುಂದುವರಿಸುತ್ತಿದೆ.
























