ಮಂಗಳಪಾದೆ ರಾಮಸಮುದ್ರ ಬಳಿಯ ತೋಟಗಾರಿಕಾ ಇಲಾಖೆ

ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ ಇಂದು ಅಕ್ಟೋಬರ್ 4ರಂದು ಮಂಗಳಪಾದೆ, ರಾಮಸಮುದ್ರ ಬಳಿಯ ತೋಟಗಾರಿಕಾ ಇಲಾಖೆಯಲ್ಲಿ ಗೋಗ್ರಾಸ ಸೇವಾ ಅಭಿಯಾನ ನಡೆಯಿತು.
ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.), ಕಾರ್ಕಳ ಇವರ ಸಹಕಾರದೊಂದಿಗೆ ನಡೆದ ಅಭಿಯಾನದಲ್ಲಿ ತಂಡದ ಸದಸ್ಯರು ಹುಲ್ಲು ಕಟಾವು ಮಾಡಿ, ಸುಮಾರು ಒಂದು ಪಿಕಪ್ ಲೋಡ್ ಹುಲ್ಲನ್ನು ಹೆಬ್ರಿಯ ಕೆರೆಬೆಟ್ಟುವಿನಲ್ಲಿರುವ ಸರ್ಕಾರಿ ಗೋಶಾಲೆಗೆ ತಲುಪಿಸಿದರು.
“ಗೋವಿಗಾಗಿ ಮೇವು – ಗೋಗ್ರಾಸ ಅಭಿಯಾನ”ದ 5ನೇ ಸೇವಾ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡಿತು.






















