27.3 C
Udupi
Thursday, October 15, 2026
spot_img
spot_img
HomeBlogಸ್ಟಿಂಗ್‌ನ ಸೂತ್ರಧಾರಿ, ಪಾತ್ರಧಾರಿ ಎಲ್ರೂ ಕಾಂಗ್ರೆಸ್‌ನವರೇ; ತನಿಖೆ ಮಾಡಿದ್ರೆ ಡೈರೆಕ್ಟರ್, ಪ್ರೊಡ್ಯೂಸರ್‌ಗಳು ಅವರೇ ಅಂತ ಗೊತ್ತಾಗುತ್ತೆ...

ಸ್ಟಿಂಗ್‌ನ ಸೂತ್ರಧಾರಿ, ಪಾತ್ರಧಾರಿ ಎಲ್ರೂ ಕಾಂಗ್ರೆಸ್‌ನವರೇ; ತನಿಖೆ ಮಾಡಿದ್ರೆ ಡೈರೆಕ್ಟರ್, ಪ್ರೊಡ್ಯೂಸರ್‌ಗಳು ಅವರೇ ಅಂತ ಗೊತ್ತಾಗುತ್ತೆ : ಮಾಜಿ ಸಚಿವ ಸಿಟಿ ರವಿ

ಬೆಂಗಳೂರು: ಸ್ಟಿಂಗ್ ಆಪರೇಷನ್‌ನ ಸೂತ್ರಧಾರರು ಮತ್ತು ಪಾತ್ರಧಾರಿಗಳು ಕಾಂಗ್ರೆಸ್‌ನವರೇ ಆಗಿದ್ದಾರೆ. ಸಮಗ್ರ ತನಿಖೆ ನಡೆಸಿದರೆ ಇದರ ನಿರ್ದೇಶಕರು ಹಾಗೂ ನಿರ್ಮಾಪಕರು ಯಾರೆಂಬುದು ಬಹಿರಂಗವಾಗಲಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಆರೋಪಿಸಿದ್ದಾರೆ.

ಸ್ಟಿಂಗ್ ಆಪರೇಷನ್ ಕುರಿತು ಮುಖ್ಯಮಂತ್ರಿ ಮಾತನಾಡಿರುವುದರಿಂದ ಸೂಕ್ತ ತನಿಖೆ ನಡೆಯಬೇಕು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವುದು ಸೂಕ್ತ. ಆದರೆ ಗೃಹ ಸಚಿವರು ಈವರೆಗೆ ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್‌ನ ಮರ್ಯಾದೆ ಹೋಗಬಹುದು ಎಂಬ ಕಾರಣಕ್ಕೆ ಮಾತನಾಡುತ್ತಿಲ್ಲವೇ ಎಂದು ಟೀಕಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 3 ವರ್ಷದಿಂದ ಗ್ಯಾರಂಟಿ ಮೂಲಕ ಬಂದ ಸರ್ಕಾರ. ಆದರೆ ಇದೀಗ ಹಗರಣಗಳ ಗ್ಯಾರಂಟಿಯಾಗಿದೆ. ರಾಜ್ಯದಲ್ಲಿ ಹಗರಣಗಳದೇ ಸದ್ದು ನಡೆಯುತ್ತಿದೆ. ಹೀಗಾಗಿ ಈ ವಿಷಯ ಮುಚ್ಚಿ ಹಾಕಲು ಸ್ಟಿಂಗ್ ಆಪರೇಷನ್ ತಂದಿದ್ದಾರೆ. ಸ್ಟಿಂಗ್ ಆಪರೇಷನ್ ನೈಜ್ಯ ತನಿಖೆ ಮಾಡಿದ್ರೆ ಡೈರೆಕ್ಟರ್, ಪ್ರೊಡ್ಯೂಸರ್ ಎಲ್ಲರೂ ಕಾಂಗ್ರೆಸ್‌ನವರೇ. ಹೀರೋ, ಹೀರೋಯಿನ್ ಸೇರಿ ಸೈಡ್ ಡೈರೆಕ್ಟರ್‌ಗಳು ಕಾಂಗ್ರೆಸ್‌ನವರೇ ಎಂದು ಕಿಡಿಕಾರಿದ್ದಾರೆ.

ಸ್ಟಿಂಗ್ ಪ್ರಕರಣದ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರಣಿ ಸಭೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೊದಲು ಡಿ.ಕೆ. ಶಿವಕುಮಾರ್ ಅವರನ್ನೇ ಬ್ರೈನ್ ಮ್ಯಾಪಿಂಗ್‌ಗೆ ಒಳಪಡಿಸಬೇಕು. ಅಗತ್ಯವಿದ್ದರೆ ಬಿಜೆಪಿ ನಾಯಕರನ್ನೂ ಪರೀಕ್ಷಿಸಲಿ ಎಂದರು.

ಇದೇ ವೇಳೆ, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಕಾಂಗ್ರೆಸ್ ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ದೇವೇಗೌಡ ಸೇರಿದಂತೆ ಕೆಲವೇ ಮಂದಿ ಮಾಸ್ ಲೀಡರ್‌ಗಳಿದ್ದಾರೆ. ಸಿದ್ದರಾಮಯ್ಯ ಅವರ ಪ್ರತಿಮೆಯನ್ನು ಬಿಜೆಪಿ ಸರ್ಕಾರ ತೆರವುಗೊಳಿಸಿದ್ದರೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದರು ಎಂದು ಪ್ರಶ್ನಿಸಿದ ಸಿ.ಟಿ. ರವಿ, ಕಾಂಗ್ರೆಸ್ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page